ಜನವರಿಯಲ್ಲಿ ಆಸ್ತಿ ಖರೀದಿ, ಮಾರಾಟ ಮಾಡಿದ ಬಾಲಿವುಡ್ ತಾರೆಯರ ವಿವರ
ಪ್ರಾಪರ್ಟಿ ವಿಷ್ಯ
Photo credit: PTI
By Praveen Chandra B Jan 29, 2025
Hindustan Times Kannada
ಮುಂಬೈನ ಅಂಧೇರಿ ಪ್ರದೇಶದಲ್ಲಿರುವ ತಮ್ಮ ಡ್ಯುಪ್ಲೆಕ್ಸ್ ಅಪಾರ್ಟ್‌ಮೆಂಟ್ ಅನ್ನು ಅಮಿತಾಬ್ ಬಚ್ಚನ್ 83 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ ಎಂದು ಸ್ಕ್ವೇರ್ ಯಾರ್ಡ್ಸ್ ವರದಿ ಮಾಡಿದೆ.
ಹೌದು, ಮಾರಿಬಿಟ್ಟೆ!!
Photo Credit: PTI
ಅಕ್ಷಯ್ ಕುಮಾರ್ ಮುಂಬೈನ ಬೋರಿವಾಲಿ ಪೂರ್ವ ಪ್ರದೇಶದಲ್ಲಿರುವ ತಮ್ಮ ಅಪಾರ್ಟ್ಮೆಂಟ್ ಅನ್ನು 4.25 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ ಸ್ಕ್ವೇರ್ ಯಾರ್ಡ್ಸ್ ವರದಿ ತಿಳಿಸಿದೆ.
ನಾನೂ ಮನೆ ಸೇಲ್ ಮಾಡಿದೆ !
Photo Credit: HT Files
ಬಾಲಿವುಡ್ ನಟ ವರುಣ್ ಧವನ್ ಮತ್ತು ಅವರ ಕುಟುಂಬವು ಮುಂಬೈನ ಜುಹು ಪ್ರದೇಶದಲ್ಲಿ 86.92 ಕೋಟಿ ಮೌಲ್ಯದ ಎರಡು ಐಷಾರಾಮಿ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿದೆ ಎಂದು ಆಸ್ತಿ ನೋಂದಣಿ ದಾಖಲೆಗಳಿಂದ ತಿಳಿದುಬಂದಿದೆ.
Photo Credit: ANI
ಬಾಲಿವುಡ್ ನಿರ್ದೇಶಕ ಸುಭಾಷ್ ಘಾಯ್ ಮತ್ತು ಅವರ ಪತ್ನಿ ಮುಕ್ತಾ ಘಾಯ್ ಮುಂಬೈನ ಅಂಧೇರಿಯಲ್ಲಿರುವ ಅಪಾರ್ಟ್‌ಮೆಂಟ್ ಅನ್ನು 12.85 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ ಎಂದು ಝಾಪ್‌ಕೀ ಆಸ್ತಿ ನೋಂದಣಿ ದಾಖಲೆಗಳು ತಿಳಿಸಿವೆ
Photo Credit: PTI
ಹೃತಿಕ್ ರೋಷನ್ ಮುಂಬೈನ ಗೋರೆಗಾಂವ್ ಪ್ರದೇಶದಲ್ಲಿ ತಮ್ಮ ಒಡೆತನದ 2,727 ಚದರ ಅಡಿ ವಾಣಿಜ್ಯ ಸ್ಥಳವನ್ನು ಮಾಸಿಕ 5.62 ಲಕ್ಷ ರೂ.ಗೆ ಬಾಡಿಗೆಗೆ ನೀಡಿದ್ದಾರೆ.