ಈ 8 ಸಂಗತಿಗಳನ್ನು ಗುಟ್ಟಾಗಿಯೇ ಇಡಬೇಕಂತೆ, ಅಪ್ಪಿತಪ್ಪಿ ಶೇರ್ ಮಾಡೀರಿ ಜೋಕೆ

By Reshma
Apr 17, 2024

Hindustan Times
Kannada

ಇಂದು ಇಂಟರ್‌ನೆಟ್‌, ಸೋಷಿಯಲ್‌ ಮಿಡಿಯಾಗಳ ನಡುವೆ ವೈಯಕ್ತಿಕ ಬದುಕು ಎಂಬುದು ಮರೀಚಿಕೆಯಾಗಿದೆ. ಎಲ್ಲರೂ ಎಲ್ಲವನ್ನೂ ಸಾಮಾಜಿಕವಾಗಿ ತೆರೆದಿಡುವ ಕಾಲವಿದು. ಆದರೂ ನಮ್ಮಲ್ಲಿ ಕೆಲವು ವಿಚಾರಗಳು ಗೌಪ್ಯವಾಗಿ ಇರಬೇಕಂತೆ ಇಲ್ಲದಿದ್ದರೆ, ಸಮಸ್ಯೆ ಎದುರಾಗುವುದು ಖಂಡಿತ. 

ಕೆಲವರಿಗೆ ತಮ್ಮ ಸೀಕ್ರೆಟ್‌ಗಳನ್ನು ತೀರಾ ಆತ್ಮೀಯರ ಬಳಿಯಾದ್ರೂ ಹೇಳಿಕೊಳ್ಳಬೇಕು ಅನ್ನಿಸುತ್ತದೆ. ಆದರೆ ನಾವು ನಮ್ಮ ಮನದ ಭಾವನೆಗಳನ್ನು ಹೇಳಿಕೊಳ್ಳಲು ಆಯ್ಕೆ ಮಾಡುವ ವ್ಯಕ್ತಿಗಳು ಯಾರು, ಅವರು ಹೇಗೆ ಎಂಬುದು ಮುಖ್ಯವಾಗುತ್ತದೆ. ಯಾಕೆಂದರೆ ಕೆಲವೊಮ್ಮೆ ನಂಬಿಕೆ ಇರಿಸಿದವರೇ ಹೃದಯಕ್ಕೆ ಚೂರಿ ಹಾಕಬಹುದು. 

ಬೇರೆಯವರ ಗುಟ್ಟನ್ನು ಹಂಚಿಕೊಳ್ಳಬೇಡಿ: ಯಾರೋ ನಿಮ್ಮ ಮೇಲೆ ವಿಶ್ವಾಸವಿಟ್ಟು ಯಾವುದೋ ಒಂದು ವಿಚಾರವನ್ನು ಹಂಚಿಕೊಳ್ಳುತ್ತಾರೆ ಎಂದರೆ ಅದನ್ನು ತಪ್ಪಿಯೂ ಬೇರೆಯವರ ಜೊತೆ ಹಂಚಿಕೊಳ್ಳಬೇಡಿ. 

ನಿಮ್ಮ ಸಂಬಂಧದ ಬಗ್ಗೆ: ನೀವು ಯಾರಾದನ್ನಾದರೂ ಪ್ರೀತಿಸುತ್ತಿದ್ದರೆ, ನಿಮ್ಮ ಸಂಬಂಧ ಗಟ್ಟಿಯಾಗುವವರೆಗೂ ಈ ವಿಚಾರವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಇಲ್ಲದಿದ್ದರೆ ಇದು ಭವಿಷ್ಯದಲ್ಲಿ ತೊಂದರೆ ಉಂಟು ಮಾಡಬಹುದು. 

ಕೌಟುಂಬಿಕ ವಿಚಾರಗಳು: ನಿಮ್ಮ ಹಾಗೂ ನಿಮ್ಮ ಮನೆಯವರ ನಡುವೆ ನಡೆಯುವ ಕೌಟುಂಬಿಕ ವಿಚಾರಗಳನ್ನು ತಪ್ಪಿಯೂ ಯಾರ ಮುಂದೆಯೂ ಹೇಳಿಕೊಳ್ಳಬೇಡಿ. ಇದರಿಂದ ಇನ್ನಷ್ಟು ಸಮಸ್ಯೆಗಳಾಗಬಹುದು. ನಿಮ್ಮ ವೈರಿಗಳು ಇದರ ಪ್ರಯೋಜನ ಪಡೆಯಬಹುದು. 

ಸಂಬಂಧದಲ್ಲಿ ಬಿರುಕು ಮೂಡಿದರೆ ಅದು ಇಬ್ಬರ ನಡುವೆ ಮಾತ್ರ ಇರಬೇಕು. ಮೂರನೇ ವ್ಯಕ್ತಿ ತಿಳಿಯುವುದರಿಂದ ಅಪಾಯವೇ ಹೆಚ್ಚು. ಒಂದು ವೇಳೆ ಹೇಳಿಕೊಳ್ಳಲೇಬೇಕು ಎನ್ನಿಸಿದರೆ ತೀರಾ ಆತ್ಮೀಯ ಎನ್ನಿಸುವ ಒಬ್ಬರ ಮುಂದೆ ಮಾತ್ರ ಹೇಳಿಕೊಳ್ಳಿ. 

ಹಣಕಾಸು ಪರಿಸ್ಥಿತಿ: ನಿಮ್ಮ ಹಣಕಾಸಿನ ಪರಿಸ್ಥಿತಿ ಎಷ್ಟೇ ಉತ್ತಮವಾಗಿರಲಿ ಅಥವಾ ಎಷ್ಟೇ ಕೆಟ್ಟದ್ದಾಗಿರಲಿ ಅದನ್ನು ಬೇರೆಯವರ ಮುಂದೆ ತೋರಿಸಬೇಡಿ. ಖಂಡಿತ ಇದರಿಂದ ನಿಮಗೆ ಅವಮಾನವೇ ಜಾಸ್ತಿ. 

ದಾನ ಮಾಡುವುದು: ದಾನ ಮಾಡುವುದು ನಿಜಕ್ಕೂ ಸತ್ಕಾರ್ಯ. ಆದರೆ ಎಡಗೈಯಲ್ಲಿ ನೀಡಿದ್ದು ಬಲಗೈಗೆ ತಿಳಿಯಬಾರದು ಎಂಬುದನ್ನು ಮರೆಯಬೇಡಿ, ನೀವು ದಾನ ಮಾಡಿರುವ ವಿಚಾರ ನಿಮ್ಮಲ್ಲೇ ಇರಬೇಕು. 

ನಿಮ್ಮ ಗುರಿಗಳು: ನಿಮ್ಮ ಬದುಕಿನ ಗುರಿ ಹಾಗೂ ಕನಸಗಳನ್ನು ನಿಮ್ಮಲ್ಲೇ ಇರಿಸಿಕೊಳ್ಳಿ. ಇದನ್ನು ಬೇರೆಯವರ ಜೊತೆ ಹಂಚಿಕೊಳ್ಳುವುದರಲ್ಲಿ ಅರ್ಥವಿಲ್ಲ. ಗುರಿ ಸಾಧಿಸಿದ ಮೇಲಷ್ಟೇ ಬೇರೆಯವರ ಜೊತೆ ಹಂಚಿಕೊಳ್ಳಬೇಕು. 

ಕ್ವಾಲಿಫೈಯರ್​-2 ಪಂದ್ಯ; ಆರ್​​ಆರ್​​ vs ಎಸ್​ಆರ್​ಹೆಚ್ ಮುಖಾಮುಖಿ