ನೋ ಎಂದು ನೋಯಿಸದಿರಿ, ಆತ್ಮೀಯರಿಗೆ ಇಲ್ಲ ಎನ್ನುವ ಮುನ್ನ ಹೀಗಿರಲಿ ನಿಮ್ಮ ವರ್ತನೆ  

By Reshma
Mar 29, 2024

Hindustan Times
Kannada

ಆತ್ಮೀಯರು ಎಲ್ಲಿ ನಮ್ಮಿಂದ ದೂರಾಗುತ್ತಾರೋ, ಎಲ್ಲಿ ಅವರಿಗೆ ಬೇಸರ ಆಗುತ್ತದೋ ಎಂಬ ಕಾರಣಕ್ಕೆ ʼಇಲ್ಲʼ ಎನ್ನುವುದು ಕಷ್ಟವಾಗುತ್ತದೆ. ಆದರೆ ಸಭ್ಯ ರೀತಿಯಲ್ಲಿ, ಮನಸ್ಸಿಗೆ ನೋವಾದಾಗ ರೀತಿ ನೋ ಎನ್ನಲು ಈ ಕ್ರಮ ಪಾಲಿಸಿ. 

ವಿನಂತಿಯನ್ನು ಸಂಪೂರ್ಣವಾಗಿ ನಿರಾಕರಿಸುವ ಬದಲು ಅವರ ದೃಷ್ಟಿಕೋನವನ್ನು ಶ್ಲಾಘಿಸಿ. 

ನೇರವಾಗಿ ಇಲ್ಲ, ಆಗುವುದಿಲ್ಲ ಎನ್ನುವ ಬದಲು ಪರ್ಯಾಯ ಮಾರ್ಗಗಳನ್ನು ಸೂಚಿಸಿ. 

ನೋ ಎಂದು ಹೇಳಲು ಕಾರಣ ಏನು ಎಂಬುದನ್ನು ಅರ್ಥ ಮಾಡಿಸಿ. 

ಇವರು ನಿಮ್ಮ ಬಳಿ ಸಹಾಯ ಕೇಳಿದ್ದಕ್ಕೆ ಧನ್ಯವಾದ ಹೇಳಿ. ಯಾವ ಕಾರಣಕ್ಕೆ ಮಾಡಲು ಸಾಧ್ಯವಾಗುವುದಿಲ್ಲ ವಿವರಿಸಿ. 

ನೇರವಾಗಿ ಇಲ್ಲ, ಆಗುವುದಿಲ್ಲ ಎನ್ನುವ ಬದಲು ನಿಮ್ಮ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವಂತೆ ಮಾಡಿ ನಂತರ ನೋ ಹೇಳಿ. 

ಸಹಾಯ ಕೇಳಿದರು ಎಂದ ಮಾತ್ರಕ್ಕೆ ಕಠಿಣವಾಗಿ ಪ್ರತಿಕ್ರಿಯೆ ನೀಡಬೇಡಿ. ನಯವಾಗಿಯೇ ನಿರಾಕರಿಸಿ. 

ಅವರ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಿ. ಅದಕ್ಕೆ ತಕ್ಕಂತೆ ನಿಮ್ಮ ವರ್ತನೆಯೂ ಇರಲಿ. 

ಕಾಳಜಿ ತೋರಿಸಿ: ನಿಮಗೆ ಅವರ ಮೇಲಿರುವ ಪ್ರೀತಿ, ಕಾಳಜಿ ತೋರಿ. ಈ ಬಾರಿ ನೋ ಎನ್ನಲು ಕಾರಣವನ್ನು ಕಾಳಜಿಯಿಂದಲೇ ವ್ಯಕ್ತಪಡಿಸಿ.  

ಲಕ್ಷ್ಮೀ ನಿವಾಸದ ಲೇಡಿ ವಿಲನ್‌ ಸೌಪರ್ಣಿಕಾ ಬೋಲ್ಡ್‌ ಲುಕ್‌