ಭಾರತದ ಹೆಣ್ಣುಮಕ್ಕಳು ಹಿರಿಯರಿಂದ ಪದೇ ಪದೇ ಹೇಳಿಸಿಕೊಳ್ಳುವ 10 ವಿಚಾರಗಳಿವು 

By Reshma
Apr 23, 2024

Hindustan Times
Kannada

ಪ್ರಪಂಚದ ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಹೆಣ್ಣುಮಕ್ಕಳ ವಿಚಾರದಲ್ಲಿ ಪೋಷಕರು ಸಾಕಷ್ಟು ತಲೆ ಕೆಡಿಸಿಕೊಳ್ಳುತ್ತಾರೆ. ಹೆಣ್ಣುಮಕ್ಕಳು ಹೀಗೆ ಇರಬೇಕು ಎಂಬ ಮನೋಭಾವ ಹಿಂದಿನಿಂದಲೂ ಬೆಳೆದು ಬಂದಿರುವ ಕಾರಣ ಈ ಕೆಲವು ವಿಚಾರಗಳಲ್ಲಿ ಪದೇ ಪದೇ ಮಾತು ಕೇಳುತ್ತಾರೆ. 

ನೀನು ಧರಿಸುವ ಬಟ್ಟೆಯ ಮೇಲೆ ಗಮನ ಇರಲಿ. ಅದು ನಿನ್ನ ಕುಟುಂಬವನ್ನು ಪ್ರತಿನಿಧಿಸುತ್ತದೆ ಎಂಬುದನ್ನು ಮರೆಯಬೇಡ.

ಓದು ಮುಗಿತಲ್ವಾ, ಇನ್ನೇನು ಮದುವೆ ಮಾಡೋದಾ? ಯಾವಾಗ ನಿನ್ನ ಮದುವೆ?  

ಮೊದಲು ನಿನ್ನ ಮನೆ-ಕುಟುಂಬದ ಬಗ್ಗೆ ಯೋಚಿಸು, ನಂತರ ನಿಮ್ಮ ಮಹತ್ವಾಕಾಂಕ್ಷೆ, ಗುರಿ ಕಡೆಗೆ ಗಮನ ಕೊಡು. 

ಗಟ್ಟಿಯಾಗಿ ಮಾತನಾಡಬೇಡ. ಅದು ಹುಡುಗಿಯರ ಲಕ್ಷಣವಲ್ಲ, ಸ್ವಲ್ಪ ನಿಧಾನಕ್ಕೆ ಮಾತನಾಡೋದು ಕಲಿ. 

ಈಗಲೇ ಅಡುಗೆ ಮಾಡೋಕೆ ಕಲಿ, ಮದುವೆಯಾದ ಮೇಲೆ ಅದು ಬಹಳ ಮುಖ್ಯವಾಗುತ್ತೆ. 

ನಿನ್ನ ಗಂಡನಿಗೆ ನಿನ್ನ ವೃತ್ತಿ, ಉದ್ಯೋಗ ಎಂದಿಗೂ ಮುಖ್ಯವಾಗುವುದಿಲ್ಲ, ಸಂಸಾರ ನಿಭಾಯಿಸುವುದಷ್ಟೇ ಮುಖ್ಯ. 

ಇನ್ನೇನು ಮದ್ವೆ ಆಯ್ತು, ಏನು ವಿಶೇಷ ಇಲ್ವಾ? ಇನ್ಯಾವಾಗ ಮಕ್ಕಳು ಮಾಡಿಕೊಳ್ಳೋದು. 

ಹೆಂಡತಿಯಾದವಳು ಹೊಂದಿಕೊಂಡು ಬಾಳುವುದನ್ನು ಕಲಿಬೇಕು. ಇದು ಅವಳ ಅಸ್ತಿತ್ವದ ಭಾಗ. 

ನಿನ್ನ ಗಂಡನ ಕುಟುಂಬ ನಿನಗೆ ಆದ್ಯತೆ ಆಗಿರಬೇಕು ಅನ್ನೋದು ಮರಿಬೇಡ. 

ತುಂಬಾ ಸ್ವತಂತ್ರವಾಗಿ ಯೋಚಿಸಬೇಡ, ಹೆಣ್ಣುಮಕ್ಕಳು ಮುಕ್ತವಾಗಿ ಮಾತಾಡೋದು ಗಂಡಂಗೆ ಇಷ್ಟ ಆಗೊಲ್ಲ. 

ಈ ಕನ್ನಡ ನಟಿ ಯಾರೆಂದು ಗುರುತಿಸಿ