ಮದುವೆಗೆ ಕಮಿಟ್ ಆಗುವ ಮೊದಲು ಈ 7 ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ

By Reshma
Mar 13, 2024

Hindustan Times
Kannada

ಪ್ರತಿಯೊಬ್ಬರ ಜೀವನದಲ್ಲೂ ಮದುವೆ ಎಂಬುದು ಪ್ರಮುಖ ಘಟ್ಟ. ಮದುವೆಯ ವಿಚಾರದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಬಹಳ ಮುಖ್ಯ. 

ನೀವು ಮದುವೆಯಾಗಲು ಬಯಸುತ್ತಿದ್ದರೆ ಈ ವಿಚಾರಗಳನ್ನು ತಪ್ಪದೇ ಗಮನಿಸಬೇಕು. ಮದುವೆಯ ನಿರ್ಧಾರದಲ್ಲಿ ನೀವು ಎಡವಿದರೆ ಜೀವನಪೂರ್ತಿ ತೊಂದರೆ ಅನುಭವಿಸಬೇಕಾಗುವುದು ಖಂಡಿತ. 

ಗೌರವ: ನೀವು ಮದುವೆಯಾಗುವವರನ್ನು ನೀವು ಗೌರವಿಸಬೇಕು, ಮಾತ್ರವಲ್ಲ ಅವರೂ ನಿಮ್ಮನ್ನು ಗೌರವಿಸಬೇಕು. ಕೇವಲ ನಿಮ್ಮನ್ನಲ್ಲ ಎಲ್ಲರನ್ನೂ ಹೇಗೆ ಗೌರವದಿಂದ ನೋಡುತ್ತಾರೆ ಎಂಬುದು ಮುಖ್ಯವಾಗುತ್ತದೆ. 

ಹೊಂದಾಣಿಕೆ: ಮದುವೆ ಎಂಬ ಸಂಬಂಧದಲ್ಲಿ ಹೊಂದಾಣಿಕೆ ಬಹಳ ಮುಖ್ಯ. ಪರಸ್ಪರ ತಿಳುವಳಿಕೆಯು ಸಾಂಸಾರಿಕ ಬದುಕಿನ ಬಂಡಿ ಸುಗಮವಾಗಿ ಸಾಗಲು ಅವಶ್ಯ.  

ನಂಬಿಕೆ: ಯಾವುದೇ ಸಂಬಂಧದ ಮೂಲ ನಂಬಿಕೆ. ಸಂಬಂಧದಲ್ಲಿ ನಂಬಿಕೆ ಎಲ್ಲ ಎಂದಾದರೆ ಎಂದಿಗೂ ಸಾಮರಸ್ಯ ಸಾಧ್ಯವಿಲ್ಲ.  

ಪೋಷಕ ಗುಣ: ನಿಮ್ಮ ವೃತ್ತಿಯಿಂದ ಹಿಡಿದು ನಿಮ್ಮೆಲ್ಲಾ ಸಮಸ್ಯೆಗಳ ಜೊತೆ ನಿಲ್ಲುವ ಸಂಗಾತಿಯನ್ನು ಆರಿಸಿಕೊಳ್ಳಿ. ಪೋಷಕ ಗುಣ ಇರುವ ಸಂಗಾತಿಯು ಎಂದಿಗೂ ನಿಮ್ಮನ್ನು ನೋಯಿಸುವುದಿಲ್ಲ. 

ನಿರ್ಧಾರ: ನಿಮ್ಮ ಸಂಗಾತಿಯ ನಿರ್ಧಾರ ತೆಗೆದುಕೊಳ್ಳುವುದನ್ನೂ ಗಮನಿಸಿ. ಪದೇ ಪದೇ ನಿರ್ಧಾರಗಳನ್ನು ಬದಲಿಸುವವರು ಖಂಡಿತ ಸ್ಥಿರವಾಗಿರುವುದಿಲ್ಲ. ಜೊತೆಗೆ ಅತಿಯಾದ ಹಟಮಾರಿತನವೂ ಸಲ್ಲ.

ಬೆಲೆ ಕೊಡುವವರು: ಸಂಗಾತಿಯಾದವರು ನಿಮ್ಮ ಮಾತಿಗೆ ಬೆಲೆ ಕೊಡಬೇಕು. ಕೇವಲ ತನ್ನದೂ ಮಾತ್ರ ನಡೆಯಬೇಕು, ಎಲ್ಲವೂ ತಾನು ಹೇಳಿದಂತೆ ನಡೆಯಬೇಕು ಅನ್ನುವವರನ್ನು ಖಂಡಿತ ಆರಿಸಬೇಡಿ.

ಅಂತರಿಕ ನೋಟ: ನೀವು ಸಂಗಾತಿಯನ್ನು ಆರಿಸುವಾಗ ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ನೋಟವನ್ನು ಗಮನಿಸಿ. ರೂಪಕ್ಕಿಂತ ಗುಣ ಮುಖ್ಯ ಎಂಬುದನ್ನು ಎಂದಿಗೂ ಮರೆಯಬೇಡಿ. 

ಮುಂಬೈ ಇಂಡಿಯನ್ಸ್ ತಂಡದ ಗ್ಲಾಮರಸ್‌ ಮಾಲಕಿ