ಐ ಲವ್ ಯೂ ಅಂತ ಹೇಳೋ ಮೊದಲು ಈ 6 ವಿಷಯಗಳು ನಿಮಗೆ ಗೊತ್ತಿರಬೇಕು
By Reshma Jul 09, 2024
Hindustan Times Kannada
ಪ್ರೀತಿ ಹಾಗೂ ಆಕರ್ಷಣೆ ಈ ಎರಡು ವಿಭಿನ್ನ ವಿಚಾರಗಳು. ಕೆಲವೊಮ್ಮೆ ಜನರು ಆಕರ್ಷಣೆಯನ್ನು ಪ್ರೀತಿ ಎಂದು ತಪ್ಪಾಗಿ ತಿಳಿದಿರುತ್ತಾರೆ.
ಹಲವು ಬಾರಿ ಜನರು ಮಾಡುವ ತಪ್ಪು ಎಂದರೆ ಅವರಿಗೆ ಯಾರ ಮೇಲೆ ಆಕರ್ಷಣೆ ಇರುತ್ತದೋ, ಅದನ್ನೇ ಪ್ರೀತಿ ಎಂದು ತಿಳಿದು ಪ್ರೇಮ ನಿವೇದನೆ ಮಾಡುತ್ತಾರೆ. ಅಂತಹ ಪ್ರೀತಿ ಕಾಲಕ್ರಮೇಣ ಬೇಸರ ಮೂಡಲು ಕಾರಣವಾಗುತ್ತದೆ.
ನೀವು ಯಾರಿಗಾದರೂ ಐ ಲವ್ ಯೂ ಹೇಳುವ ಮೊದಲು ಈ ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಇದರಿಂದ ನೀವು ಸಂಬಂಧದಲ್ಲಿ ದೀರ್ಘಕಾಲ ಉಳಿಯಬಹುದು ಹಾಗೂ ಪ್ರೀತಿ ವಿಚಾರದಲ್ಲಿ ಮೋಸ ಹೋಗುವುದಿಲ್ಲ.
ಯಾವುದೇ ವ್ಯಕ್ತಿಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳದೇ ಪ್ರೀತಿ ವ್ಯಕ್ತಪಡಿಸಬಾರದು. ನಿಮ್ಮ ಪ್ರೀತಿಯನ್ನು ನಿವೇದನೆ ಮಾಡುವ ಮೊದಲು ಅವರೊಂದಿಗೆ ಸಾಕಷ್ಟು ಸಮಯ ಕಳೆಯಬೇಕು ಎಂದು ರಿಲೇಷನ್‌ಶಿಪ್ ತಜ್ಞರು ಸಲಹೆ ನೀಡುತ್ತಾರೆ.
ಪ್ರೇಮ ಸಂಬಂಧದಲ್ಲಿ ನಾನು ಎನ್ನುವುದಕ್ಕಿಂತ ನಾವು ಎನ್ನುವುದು ಬಹಳ ಮುಖ್ಯ. ಇಬ್ಬರಲ್ಲೂ ನಾವು ಎಂಬ ಭಾವನೆ ಮೂಡಿದಾಗ ಪ್ರೇಮ ನಿವೇದನೆ ಮಾಡಿ.
ನಿಮಗೆ ಸರಿಯಾದ ಸಂಗಾತಿಯನ್ನು ನೀವು ಕಂಡುಕೊಂಡಿದ್ದೀರಿ ಎಂದು ನಿಮಗೆ ಅನ್ನಿಸಿದರೆ ಪ್ರೀತಿಯನ್ನು ಹೇಳಿಕೊಳ್ಳಲು ಬೇರೆ ದಾರಿಯನ್ನೇ ಕಂಡುಕೊಳ್ಳಬಹುದು.
ಹೊಸ ಸಂಬಂಧದಲ್ಲಿ ನೀವು ಪ್ರತಿದಿನವೂ ಪರಸ್ಪರ ಆರೋಗ್ಯಕರ ಸಂಭಾಷಣೆ ಹೊಂದಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ನಿಮ್ಮ ಕಣ್ಣಿಗೆ ಇಷ್ಟವಾಗಿದ್ದು ಮನಸ್ಸಿಗೆ ಇಷ್ಟವಾಗದೇ ಇರಬಹುದು. ಅದಕ್ಕಾಗಿ ಭೇಟಿಯಾಗಿ ಮಾತನಾಡಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.
ಪ್ರೀತಿಯನ್ನು ಪಡೆಯುವ ಮೊದಲು ನೀವು ಆ ವ್ಯಕ್ತಿಯೊಂದಿಗೆ ಸಂತೋಷದಿಂದ ಇರಲು ಸಾಧ್ಯವೇ ಎಂಬುದನ್ನು ಮೊದಲು ಯೋಚಿಸಬೇಕು. ದೈಹಿಕ ಆಕರ್ಷಣೆಯಿಂದ ನೀವು ಭಾವನಾತ್ಮಕ ಆಕರ್ಷಣೆಯನ್ನು ಲಿಂಕ್ ಮಾಡುವಂತಿಲ್ಲ. ಹಾಗಾಗಿ ಅವರು ನಿಮಗೆ ಹೊಂದುತ್ತಾರೋ ಇಲ್ಲವೋ ಎಂಬುದನ್ನು ಮೊದಲು ತಿಳಿದುಕೊಳ್ಳಿ.
ನೀವು ಐ ಲವ್ ಯು ಎಂದ ಮಾತ್ರಕ್ಕೆ ನೀವು ಪ್ರೀತಿ ಮಾಡುತ್ತಿರುವ ವ್ಯಕ್ತಿ ನಿಮ್ಮ ಪ್ರೀತಿಯನ್ನು ಒಪ್ಪಬೇಕು ಎಂದೇನಿಲ್ಲ. ಅವರ ನಿರಾಕರಣೆಗೂ ನೀವು ಸಿದ್ಧರಾಗಬೇಕು. ಸಕರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂದು ಮಾತ್ರ ನೀವು ಕೋಪಗೊಳ್ಳುವುದು, ಹತಾಶರಾಗುವುದು ಮಾಡಬಾರದು.
Horoscope: ಏಪ್ರಿಲ್ 22ರ ಮಂಗಳವಾರ 12 ರಾಶಿಯವರ ಫಲಾಫಲ ಹೀಗಿವೆ