ಸುಖಕರ ದಾಂಪತ್ಯ ಜೀವನಕ್ಕೆ ಈ ಸಲಹೆಗಳನ್ನು ಪಾಲಿಸಿ

freepik

By Priyanka Gowda
Oct 09, 2024

Hindustan Times
Kannada

ದಾಂಪತ್ಯದಲ್ಲಿ ಸಮಸ್ಯೆಗಳು, ಜಗಳಗಳು ಇರುವುದು ಸಾಮಾನ್ಯ. ಆದರೆ, ಅತಿರೇಕಕ್ಕೆ ಹೋದಾಗ ಸಮಸ್ಯೆಗಳು ಮತ್ತಷ್ಟು ಬಿಗಡಾಯಿಸಬಹುದು. ಉತ್ತಮ ದಾಂಪತ್ಯಕ್ಕಾಗಿ ಈ ಸಲಹೆ ಪಾಲಿಸಿ.

freepik

ಮುಕ್ತ ಸಂವಹನ: ಏನೇ ಸಮಸ್ಯೆ ಇದ್ದರೂ ಮಾತನಾಡದೆ ದೂರವಾಗುವುದನ್ನು ಬಿಟ್ಟು, ಪರಸ್ಪರ ಮಾತನಾಡಿಕೊಳ್ಳುವುದು ಬಹಳ ಮುಖ್ಯ.

freepik

ತಪ್ಪುಗಳನ್ನು ಒಪ್ಪಿಕೊಳ್ಳಿ: ತಪ್ಪಿದ್ದರೆ ಕ್ಷಮೆಯಾಚಿಸುವುದರಿಂದ ಏನೂ ಆಗುವುದಿಲ್ಲ. ಪ್ರಾಮಾಣಿಕವಾಗಿ ಕ್ಷಮೆಯಾಚಿಸಿ, ತಪ್ಪುಗಳನ್ನು ಒಪ್ಪಿಕೊಳ್ಳುವುದರಿಂದ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ.

freepik

ಕಾರಣ ಹುಡುಕಿ: ಏನು ತಪ್ಪಾಗಿದೆ ಅಥವಾ ಏನು ಸಮಸ್ಯೆಯಾಗಿದೆ ಅನ್ನುವ ಬಗ್ಗೆ ಕಾರಣ ಹುಡುಕಿ. ಇಬ್ಬರೂ ಕೂತು ಚರ್ಚಿಸಿ. ಮುಂದೆ ಈ ರೀತಿ ತಪ್ಪಾಗದಂತೆ ಎಚ್ಚರವಹಿಸಿ.

freepik

ಉತ್ತಮ ಸಮಯ ಕಳೆಯಿರಿ: ಪತಿ-ಪತ್ನಿ ಇಬ್ಬರೂ ಉತ್ತಮ ಸಮಯವನ್ನು ಕಳೆಯಿರಿ. ಹೊರಗೆ ಸುತ್ತಾಡುವುದು, ತಿನ್ನುವುದು ಇತ್ಯಾದಿ.

freepik

ತಾಳ್ಮೆಯಿಂದಿರಿ: ಕೋಪ, ಜಗಳ ದಾಂಪತ್ಯದಲ್ಲಿ ಸಾಮಾನ್ಯ. ಆದಷ್ಟು ತಾಳ್ಮೆ ಕಾಪಾಡಿಕೊಳ್ಳುವುದು ಬಹಳ ಮುಖ್ಯ.

freepik

ವೃತ್ತಿಪರರ ಸಹಾಯ ಪಡೆಯಿರಿ: ದಂಪತಿ ಮಧ್ಯೆ ಬಿರುಕು ಹೆಚ್ಚಾದರೆ, ಮನೋಶಾಸ್ತ್ರಜ್ಞರ ಬಳಿ ಕೌನ್ಸಿಲಿಂಗ್ ಪಡೆಯಬಹುದು.

freepik

ಸಕಾರಾತ್ಮಕ ಅಂಶಗಳ ಮೇಲಿರಲಿ ಗಮನ: ಪರಸ್ಪರ ಪ್ರೀತಿ ಮಾಡುತ್ತಿದ್ದ ದಿನಗಳು, ಮದುವೆಯಾದ ಹೊಸತರಲ್ಲಿನ ದಿನಗಳನ್ನು ಮೆಲುಕು ಹಾಕಿ.

freepik

ಹೂವಿನ ಚಿತ್ತಾರದ ಉಡುಗೆ ತೊಟ್ಟು ಕಿವಿಗೆ ಹೂವಿಟ್ಟ ನಿರೂಪಕಿ ಅನುಪಮಾ ಗೌಡ 

Umesh Photography