ರಾಶಿ ಪ್ರಕಾರ ಯಾವ ರಾಶಿಯವರು ಹೇಗೆ ಪ್ರೀತಿ ವ್ಯಕ್ತಪಡಿಸ್ತಾರೆ ನೋಡಿ 

By Reshma
Mar 03, 2024

Hindustan Times
Kannada

ಮೇಷ ರಾಶಿ: ಇವರು ಸಖತ್‌ ಬೋಲ್ಡ್‌. ಈ ರಾಶಿಯವರು ಯಾರನ್ನಾದ್ರೂ ಇಷ್ಟಪಟ್ರೆ ಮೊದಲು ಇವ್ರೇ ತಮ್ಮ ಪ್ರೀತಿ ಎಕ್ಸ್‌ಪ್ರೆಸ್‌ ಮಾಡ್ತಾರೆ. ರೊಮ್ಯಾಂಟಿಕ್‌ ಆಗಿರೋದು ಇವರಿಗಿಷ್ಟ. 

ವೃಷಭ ರಾಶಿ: ಇವರಿಗೆ ತಾಳ್ಮೆ ಜಾಸ್ತಿ. ಯಾವುದೇ ಕೆಲಸ ಮಾಡುವ ಮೊದಲ ತಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಇವರು ಯಾರನ್ನಾದ್ರೂ ಇಷ್ಟಪಟ್ರೆ ಅಡುಗೆ ಮಾಡಿ ತಿನ್ನಿಸೋದು, ಗಿಫ್ಟ್‌ ಕೊಡೋದು ಮಾಡ್ತಾರೆ. ಕಾಳಜಿ ಕೂಡ ತೋರಿಸ್ತಾರೆ. 

ಮಿಥುನ: ಇವರದ್ದು ಸ್ನೇಹಪರ ಮನೋಭಾವ. ಇವರು ಮಾತನಾಡುವುದು ಹಾಗೂ ತಮಾಷೆಯ ಸ್ವಭಾವವನ್ನು ಇಷ್ಟಪಡುತ್ತಾರೆ. ಇಷ್ಟಪಟ್ಟವರ ಮೇಲೆ ಮೋಡಿ ಮಾಡುವ ಕಲೆ ಇವರಿಗಿದೆ. 

ಕಟಕ ರಾಶಿ: ಅತಿಯಾಗಿ ಕಾಳಜಿ ಮಾಡುತ್ತಾರೆ. ಕರುಣೆ ಹಾಗೂ ಬೆಂಬಲ ತೋರುವ ಮೂಲಕ ಪ್ರೋತ್ಸಾಹಿಸುತ್ತಾರೆ. ಆ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. 

ಸಿಂಹ ರಾಶಿ: ಇವರು ಬಹಳ ಆತ್ಮವಿಶ್ವಾಸ ಹೊಂದಿರುತ್ತಾರೆ. ತಮ್ಮ ಕ್ರಷ್‌ ಅನ್ನು ಇಂಪ್ರೆಸ್‌ ಮಾಡಲು ಸ್ಟೈಲಿಶ್‌ ಆಗಿ ಇರಲು ಬಯಸುತ್ತಾರೆ. ಇವರು ಅಟೇಂಷನ್‌ ಸೀಕರ್‌ಗಳು

ಕನ್ಯಾರಾಶಿ: ಇವರು ಪ್ರಾಕ್ಟಿಕಲ್‌ ಮನೋಭಾವದವರು. ಯಾವುದೇ ಕೆಲಸ ಮಾಡುವ ಮೊದಲು ಸಾಕಷ್ಟು ಯೋಚಿಸುತ್ತಾರೆ. 

ತುಲಾ: ಇವರು ತಮಗೆ ಯಾರ ಮೇಲಾದ್ರೂ ಕ್ರಷ್‌ ಆಗಿದ್ರೆ ರೊಮ್ಯಾಂಟಿಕ್‌ ವಾತಾವರಣ ಸೃಷ್ಟಿಸಲು ಇಷ್ಟಪಡುತ್ತಾರೆ. ತಮ್ಮ ಕ್ರಷ್‌ ಸ್ಪೆಷಲ್‌ ಆಗಲು ಬೇಕಾದ ತಯಾರಿ ಮಾಡುವುದರಲ್ಲಿ ನಿಸ್ಸೀಮರು.

ವೃಶ್ಚಿಕ: ಇವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಹಿಂಜರಿಯುವುದಿಲ್ಲ. ತಮ್ಮ ಪ್ರೀತಿ ಅಥವಾ ಕ್ರಷ್‌ ಮೇಲೆ ಒಲವಿನ ಹೊಳೆ ಹರಿಸುತ್ತಾರೆ. 

ಧನು: ಇವರು ಸಾಹಸ ಮನೋಭಾವದವರು. ತಮ್ಮ ಕ್ರಷ್‌ನೊಂದಿಗೆ ಹೊಸ ವಿಚಾರಗಳತ್ತ ತೆರೆದುಕೊಳ್ಳಲು ಇಷ್ಟಪಡುತ್ತಾರೆ. ಸರ್ಪ್ರೈಸ್‌ಗಳು ಇವರಿಗೆ ಹೆಚ್ಚು ಇಷ್ಟವಾಗುತ್ತದೆ.

ಮಕರ ರಾಶಿ: ಇವರು ಜವಾಬ್ದಾರಿ ಹೊಂದಿರುವವರು. ವಿಶ್ವಾಸಾರ್ಹತೆ ಇವರಿಗೆ ಇಷ್ಟ. ಇವರು ತಮ್ಮ ಮೋಹದ ಮೂಲಕ ಕ್ರಷ್‌ ತಮ್ಮ ಮೇಲೆ ಒಲವು ಮೂಡಿಸಿಕೊಳ್ಳಬೇಕು ಎಂದು ಬಯಸುತ್ತಾರೆ. 

ಕುಂಭರಾಶಿ: ಇವರು ಸ್ವತಂತ್ರ ಮನೋಭಾವದವರು. ಇವರು ಮೊದಲ ಸ್ನೇಹ ಮಾಡುತ್ತಾರೆ. ತಮ್ಮ ಕ್ರಷ್‌ನ ಆಸಕ್ತಿಗಳಿಗೆ ಬೆಂಬಲ ಸೂಚಿಸುವ ಮೂಲಕ ಪ್ರೀತಿ ವ್ಯಕ್ತಪಡಿಸುತ್ತಾರೆ. 

ಮೀನ: ಇವರು ಕಲ್ಪನಾಜೀವಿಗಳು. ಇವರು ತಮ್ಮ ಭಾವನೆಗಳನ್ನು ಸೃಜನಾತ್ಮಕವಾಗಿ ವ್ಯಕ್ತಪಡಿಸುತ್ತಾರೆ. ಇವರು ತಮ್ಮ ಪ್ರೀತಿಪಾತ್ರರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ನಿಸ್ಸೀಮರು.  

ವಿಶ್ವದ ಅತ್ಯಂತ ಹಳೆಯ ನಗರಗಳು

ಇಂದಿಗೂ ಜನವಸತಿ ಇರುವ 5 ಪ್ರಾಚೀನ ನಗರಗಳಿವು

UNSPLASH, HOW STUFF WORKS