ಕನಸಿನಲ್ಲಿ ಈ ಪಕ್ಷಿಗಳನ್ನು ಕಂಡರೆ ಬಹಳ ಬೇಗ ಶ್ರೀಮಂತರಾಗುತ್ತೀರಿ 

By Reshma
Feb 25, 2024

Hindustan Times
Kannada

ಸ್ವಪ್ನಶಾಸ್ತ್ರದ ಪ್ರಕಾರ ನಾವು ಕಾಣುವ ಪ್ರತಿ ಕನಸಿಗೂ ಅರ್ಥವಿದೆ. ಕೆಲವು ಕನಸುಗಳು ಭವಿಷ್ಯದ ಮುನ್ಸೂಚನೆಯೂ ಹೌದು.

ಧರ್ಮಗ್ರಂಥಗಳು ಕೂಡ ಕನಸಿನಲ್ಲಿ ಕಾಣುವ ವಿಚಾರಗಳು ಭವಿಷ್ಯವನ್ನು ಸೂಚಿಸುತ್ತವೆ ಎಂದು ಹೇಳಿವೆ.

ಸ್ವಪ್ನಶಾಸ್ತ್ರದ ಪ್ರಕಾರ ನಿಮ್ಮ ಕನಸಿನಲ್ಲಿ ಈ ಮೂರು ಹಕ್ಕಿಗಳು ಬಂದ್ರೆ ನೀವು ಬೇಗ ಶ್ರೀಮಂತರಾಗುತ್ತೀರಿ. ಆ ಹಕ್ಕಿಗಳು ಯಾವುವು ನೋಡಿ 

ಗಿಳಿ: ಕನಸಿನಲ್ಲಿ ಗಿಣಿಯನ್ನು ಕಂಡರೆ ಶುಭವಾಗುತ್ತದೆ ಎಂದು ಸ್ವಪ್ನಶಾಸ್ತ್ರ ಹೇಳುತ್ತದೆ.

ಗಿಳಿಯ ಕನಸು ಬಿದ್ದರೆ ಶೀಘ್ರದಲ್ಲೇ ನೀವು ಯಾವುದೋ ಮೂಲದಿಂದ ಹಣ ಪಡೆಯುತ್ತೀರಿ ಎಂದರ್ಥ. 

ಅಲ್ಲದೇ ಈ ಕನಸಿನಿಂದ ನಿಮ್ಮ ವೈವಾಹಿಕ ಜೀವನದಲ್ಲಿ ಖುಷಿ ಹೆಚ್ಚುತ್ತದೆ. 

ಗೂಬೆ: ಗೂಬೆಯನ್ನು ಲಕ್ಷ್ಮೀದೇವಿಯ ವಾಹನ ಎಂದು ಪರಿಗಣಿಸಲಾಗುತ್ತದೆ. ಕನಸಿನಲ್ಲಿ ಗೂಬೆ ಕಂಡರೆ ಅದು ಶುಭಸೂಚಕ ಎಂದು ಪರಿಗಣಿಸಲಾಗುತ್ತದೆ. 

ಗೂಬೆಯ ಕನಸು ಬಿದ್ದರೆ ನೀವು ಆರ್ಥಿಕ ಲಾಭ ಪಡೆಯಲಿದ್ದೀರಿ ಎಂದರ್ಥ. 

ನವಿಲು: ಕನಸಿನಲ್ಲಿ ನವಿಲನ್ನು ಕಾಣುವುದು ಮಂಗಳಕರ ಎಂದು ಪರಿಗಣಿಸಲಾಗಿದೆ. ಈ ಕನಸು ಬಿದ್ದರೆ ಶೀರ್ಘದಲ್ಲೇ ನೀವು ಜೀವನದಲ್ಲಿ ದೊಡ್ಡ ಸಾಧನೆ ಮಾಡುತ್ತೀರಿ ಎಂದರ್ಥ.   

ದೇಶದಲ್ಲಿ ಲಭ್ಯವಿರುವ 20 ಲಕ್ಷಕ್ಕೂ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರುಗಳು

Photo Credit: X/@PowerDrift