ನಿರ್ಜಲ ಏಕಾದಶಿಯಂದು ಏನು ಮಾಡಬೇಕು? ಏನು ಮಾಡಬಾರದು?

By Raghavendra M Y
Jun 11, 2024

Hindustan Times
Kannada

ಜ್ಯೇಷ್ಠ ಶುಕ್ಲ ಪಕ್ಷದ ನಿರ್ಜಲ ಏಕಾದಶಿ ದಿನ ನಿರ್ಜಲ ಏಕಾದಶಿ ಉಪವಾಸ ಮಾಡಲಾಗುತ್ತೆ. ಇದನ್ನ ಭೀಮಸೇನಿ ಏಕಾದಶಿ, ಪಾಂಡವ ಏಕಾದಶಿ ಅಂತಲೂ ಕರೆಲಾಗುತ್ತೆ

ನಿರ್ಜಲ ಏಕಾದಶಿ ವಿಷ್ಣುವನ್ನ ಪೂಜಿಸುವ ಸಂಪ್ರದಾಯವಿದೆ. ನಿರ್ಜಲ ಏಕಾದಶಿಯ ಉಪವಾಸವನ್ನ ಅತ್ಯಂತ ಕಷ್ಟವೆಂದು ಕರೆಲಾಗುತ್ತೆ. ನೀರು ಸಹ ಕುಡಿಯದ ಉಪವಾಸವಿದು

2024ರ ಜೂನ್ 18 ರಂದು ನಿರ್ಜಲ ಏಕಾದಶಿಯನ್ನು ಆಚರಿಸಲಾಗುತ್ತದೆ. ಈ ದಿನ ಏನು ಮಾಡಬೇಕು, ಏನು ಮಾಡಬಾರದು ಅನ್ನೋದನ್ನ ತಿಳಿಯಿರಿ

ನಿರ್ಜಲ ಏಕಾದಶಿ ಉಪವಾಸ ದಿನದಂದು ಶುಭ್ರವಾದ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಕಪ್ಪು, ಕಂದು ಬಣ್ಣದ ಬಟ್ಟೆ ಬಳಸಬೇಡಿ

 ಈ ದಿನ ಭಗವಾನ್ ವಿಷ್ಣುವನ್ನು ಪೂಜಿಸಿ. ನಿರ್ಜಲ ಏಕಾದಶಿ ಉಪವಾಸದ ಕಥೆಯನ್ನು ಕೇಳಬೇಕು

ನಿರ್ಜಲ ಏಕಾದಶಿ ಪೂಜೆಯ ನಂತರ ಜಲ ಕಲಶ ಅಥವಾ ನೀರನ್ನು ದಾನ ಮಾಡಿ. ಇದರಿಂದ ನೀವು ವಿಷ್ಣುವಿನ ಆಶೀರ್ವಾದ ಪಡೆಯುತ್ತೀರಿ

ಈ ದಿನ ಸುಳ್ಳು ಹೇಳಬೇಡಿ. ಇತರರನ್ನ ದ್ವೇಷಿಸಬೇಡಿ, ಬೇರೆಯವರ ಬಗ್ಗೆ ಕೆಟ್ಟದಾಗಿ ಯೋಚಿಸಬೇಡಿ. ಕೆಟ್ಟ ಕೆಲಸಗಳನ್ನ ಮಾಡಬೇಡಿ

ನಿರ್ಜಲ ಏಕಾದಶಿಯಂದು ಕೂದಲು ಕತ್ತರಿಸಬೇಡಿ, ಕ್ಷೌರ ಮಾಡಬೇಡಿ, ಉಗುರು ಕತ್ತರಿಸಬಾರದು

ಮಾಂಸ, ಮದ್ಯ, ಬೆಳ್ಳುಳ್ಳಿ ಹಾಗೂ ಈರುಳ್ಳಿಯನ್ನು ಈ ದಿನ ಸೇವಿಸಬೇಡಿ. ಮನೆಯಲ್ಲಿ ಪೊರಕೆ ಬಳಸಬೇಡಿ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ

ಏಲಕ್ಕಿ ನೀರು ಕುಡಿಯುವುದರಿಂದ ಸಿಗುವ ಆರೋಗ್ಯದ ಲಾಭಗಳಿವು

Pexel