ಈ ಎಣ್ಣೆ ಬಳಸಿ ದೀಪ ಹಚ್ಚಿದರೆ ಶಿವನ ಅನಗ್ರಹ ನಿಮಗೆ ದೊರೆಯಲಿದೆ

By Rakshitha Sowmya
Jun 06, 2024

Hindustan Times
Kannada

ಹಿಂದೂ ಧರ್ಮದಲ್ಲಿ ಪ್ರತಿದಿನ ದೇವಾಲಯ, ಮನೆಗಳಲ್ಲಿ ದೀಪ ಹಚ್ಚಿ ದೇವರ ಪೂಜೆ ಮಾಡಲಾಗುತ್ತದೆ

ದೇವರಿಗೆ ದೀಪ ಹಚ್ಚುವಾಗ ತುಪ್ಪ, ವಿವಿಧ ರೀತಿಯ ಎಣ್ಣೆ ಬಳಸಲಾಗುತ್ತದೆ

ಶಿವನಿಗೆ ಹಿಪ್ಪೆ ಎಣ್ಣೆಯನ್ನು ಬಳಸಿ ದೀಪ ಹಚ್ಚಿ ಪೂಜಿಸಿದರೆ ಮಹದೇವನು ಸಂತುಷ್ಟನಾಗುತ್ತಾನೆ

ಶಿವನಿಗೆ ಹಿಪ್ಪೆ ಎಣ್ಣೆ ಎಂದರೆ ಬಹಳ ಇಷ್ಟ, ಆದ್ದರಿಂದ ಆ ಎಣ್ಣೆಯಿಂದ ದೀಪ ಹಚ್ಚಿದರೆ ಶಿವನ ಕೃಪೆಗೆ ಪಾತ್ರರಾಗಲಿದ್ದೀರಿ

ಹಿಪ್ಪೆ ಎಣ್ಣೆಯೊಂದಿಗೆ 8 ಬತ್ತಿಗಳನ್ನು ಬಳಸಿ ಶಿವನಿಗೆ ದೀಪ ಹಚ್ಚಬೇಕು

ಈ ರೀತಿ ಮಾಡುವುದರಿಂದ ಮನೆಯಲ್ಲಿ ಯಾರಿಗಾದರೂ ಆರೋಗ್ಯ ಸಮಸ್ಯೆ ಇದ್ದರೆ ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ

ವಾಸ್ತುಶಾಸ್ತ್ರದಲ್ಲಿ ಕೂಡಾ ಹಿಪ್ಪೆ ಎಣ್ಣೆಯ ಮಹತ್ವವನ್ನು ತಿಳಿಸಲಾಗಿದೆ

ವಾಸ್ತುಶಾಸ್ತ್ರದ ಪ್ರಕಾರ ಹಿಪ್ಪೆ ಎಣ್ಣೆಯಿಂದ ದೀಪ ಹಚ್ಚಿ ಶಿವನನ್ನು ಪ್ರಾರ್ಥಿಸಿದರೆ ಮನದ ಆಸೆಗಳು ನೆರವೇರುತ್ತದೆ

ಪ್ರತಿದಿನ ಸಂಜೆ ಹಿಪ್ಪೆ ಎಣ್ಣೆಯ ದೀಪ ಹಚ್ಚಿದರೆ ಮನೆಯಲ್ಲಿ ಸದಾ ಧನಾತ್ಮಕ ಶಕ್ತಿ ತುಂಬಿರುತ್ತದೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಪ್ರತಿದಿನಿ ಬೆಳಗ್ಗೆ ನೆನೆಸಿಟ್ಟ ಧನಿಯಾ ನೀರು ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳಿವು