ಕಲ್ಕಿ ಯಾರು, ಯಾವಾಗ ಎಲ್ಲಿ ಅವತರಿಸುತ್ತಾನೆ?

By Rakshitha Sowmya
Apr 26, 2024

Hindustan Times
Kannada

ಧಾರ್ಮಿಕ ನಂಬಿಕೆಗಳ ಪ್ರಕಾರ ವಿಷ್ಣುವು 24 ಅವತಾರಗಳನ್ನು ಎತ್ತುತ್ತಾನೆ, ಅದರಲ್ಲಿ ಕಲ್ಕಿ ಅವತಾರ ಕೂಡಾ ಒಂದು

ನಂಬಿಕೆಗಳ ಪ್ರಕಾರ ಅಧರ್ಮವು ಉತ್ತುಂಗ ಪರಿಸ್ಥಿತಿಯಲ್ಲಿರುವಾಗ ಕಲ್ಕಿಯು ಧರ್ಮವನ್ನು ಮರುಸ್ಥಾಪಿಸಲು ಮತ್ತೆ ಬರುತ್ತಾನೆ

ಆದರೆ ಕಲ್ಕಿ ಯಾವಾಗ, ಎಲ್ಲಿ ಅವತರಿಸುತ್ತಾನೆ ಎಂಬುದು ಬಹಳ ಜನರಿಗೆ ಗೊಂದಲವಿದೆ

ಮತ್ಸ್ಯ ಪುರಾಣದಲ್ಲಿ ವಿಷ್ಣುವಿನ ಕಲ್ಕಿ ಅವತಾರದ ಬಗ್ಗೆ ಉಲ್ಲೇಖವಿದೆ. ಕಲ್ಕಿಯು ಕಲಿಯುಗ ಹಾಗೂ ಸತ್ಯಯುಗಗಳ ನಡುವೆ ನಡೆಯಲಿದೆ

ವಿಷ್ಣುವಿನ 10ನೇ ಅವತಾರವಾದ ಕಲ್ಕಿಯು ಉತ್ತರ ಪ್ರದೇಶದ ಸಂಭಾಲ್‌ ಗ್ರಾಮದಲ್ಲಿ ಜನಿಸುತ್ತಾನೆ

ಧರ್ಮ ಗ್ರಂಥಗಳ ಪ್ರಕಾರ ಕಲ್ಕಿಯು ರಾಕ್ಷಸರನ್ನು ಸಂಹಾರ ಮಾಡಲು ಬಿಳಿ ಕುದುರೆ ಮೇಲೆ ಕುಳಿತು ಬರುತ್ತಾನೆ

ಕಲ್ಕಿಯ ಕುದುರೆ ಹೆಸರು ದೇವದತ್ತ, ಕಲ್ಕಿಯು ತನ್ನ ಕತ್ತಿಯಿಂದ ಪಾಪಿಗಳನ್ನು ಸಂಹರಿಸುವನೆಂದು ನಂಬಲಾಗಿದೆ

ಕಲ್ಕಿ ಎಂಬ ಹೆಸರಿನ ಪುರಾಣ ಕೂಡಾ ಇದೆ.  ವಿಷ್ಣುವಿನ ಕಲ್ಕಿ ಅವತಾರವು ವಿಷ್ಣುಯಶ ಎಂಬ ತಪಸ್ವಿ ಬ್ರಾಹ್ಮಣನ ಮನೆಯಲ್ಲಿ ಜನನವಾಗುತ್ತದೆ

ಕಲ್ಕಿಯು ಜನಿಸಿದಾಗ ಆತನ ದೇವಾಲಯ ಕೂಡಾ ಸ್ಥಾಪನೆಯಾಗುತ್ತದೆ ಎಂದು ಧರ್ಮ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ

 ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಭಾರತದ ಮುಂದಿನ ಕೋಚ್ ಹೀಗಿರಬೇಕು, ಬಿಸಿಸಿಐ ನಿರೀಕ್ಷೆಗಳೇನು?