ಭಾರತ ಸಂವಿಧಾನದ ಬಗ್ಗೆ ನೀವು ತಿಳಿಯಬೇಕಾದ 8 ಪ್ರಮುಖ ಅಂಶಗಳು
By Meghana B
Jan 25, 2024
Hindustan Times
Kannada
ಭಾರತದ ಸಂವಿಧಾನವು ವಿಶ್ವದ ಅತೀ ದೊಡ್ಡ ಲಿಖಿತ ಸಂವಿಧಾನವಾಗಿದ್ದು, ಸಂಪೂರ್ಣ ಕೈ ಬರಹದಲ್ಲಿಯೇ ಬರೆಯಲಾಗಿದೆ
2 ವರ್ಷ 11 ತಿಂಗಳು 18 ದಿನಗಳ ಕಾಲ ಅಂದರೆ ಸರಿಸುಮಾರು 3 ವರ್ಷ ಸಮಯ ತೆಗೆದುಕೊಂಡು ಸಂವಿಧಾನ ರಚಿಸಲಾಗಿದೆ
ಡಾ. ಬಿಆರ್ ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಕರಡು ಸಮಿತಿ ರಚಿಸಿ ಸಂವಿಧಾನವನ್ನು ಜಾರಿಗೆ ತರಲಾಗಿದೆ. ಡಾ.ರಾಜೇಂದ್ರ ಪ್ರಸಾದ್ ಅವರು ಸಂವಿಧಾನ ಸಭೆಯ ಅಧ್ಯಕ್ಷರಾಗಿದ್ದರು.
1949 ನವೆಂಬರ್ 26 ರಂದು ಸಂವಿಧಾನವನ್ನು ಅಂಗೀಕರಿಸಲಾಯಿತು. ಪ್ರತಿವರ್ಷ ಈ ದಿನವನ್ನು (ನ.26) ಸಂವಿಧಾನ ದಿನ ಎಂದು ಆಚರಿಸಲಾಗುತ್ತದೆ.
1950 ಜನವರಿ 26 ರಂದು ಸಂವಿಧಾನವನ್ನು ಜಾರಿಗೆ ತರಲಾಯಿತು. ಈ ದಿನವನ್ನು (ಜ.26) ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತದೆ.
ಭಾರತ ಸಂವಿಧಾನವು ಪೀಠಿಕೆ, 470 ವಿಧಿಗಳು, 12 ಅನುಚ್ಛೇದಗಳೊಂದಿಗೆ 25 ಭಾಗಗಳನ್ನು ಹೊಂದಿದೆ.
ಅಂಬೇಡ್ಕರ್ ಅವರನ್ನು ಸಂವಿಧಾನದ ಪಿತಾಮಹ, ಸಂವಿಧಾನ ಶಿಲ್ಪಿ ಎಂದು ಕರೆಯಲಾಗುತ್ತದೆ.
ಸಂವಿಧಾನವು ನಮ್ಮ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಎತ್ತಿ ಹಿಡಿಯುತ್ತದೆ.
ಸರ್ಕಾರ ರಚಿಸುವ ಪ್ರತಿಯೊಂದು ಕಾನೂನು, ನೀತಿ-ನಿಯಮಗಳು ಕೂಡ ಸಂವಿಧಾನಕ್ಕೆ ಅನುಗುಣವಾಗಿ ಇರಬೇಕು.
ಪುಷ್ಪ 2 ಬಿಡುಗಡೆಗೆ ಮುನ್ನ ಶ್ರೀಲೀಲಾ ನಟನೆಯ ಈ ಸಿನಿಮಾಗಳನ್ನು ಕಣ್ತುಂಬಿಕೊಳ್ಳಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ