ಭಾರತದ ಸಂವಿಧಾನದ ಕುರಿತು ಹೆಚ್ಚು ಜನರಿಗೆ ತಿಳಿದಿರದ 8 ಸಂಗತಿಗಳು
Photo Credit: Flickr
By Praveen Chandra B
Jan 25, 2025
Hindustan Times
Kannada
ಗಣರಾಜ್ಯೋತ್ಸವದ ಸಂಭ್ರಮದ ಸಮಯದಲ್ಲಿ ಭಾರತದ ಸಂವಿಧಾನದ ಕುರಿತು ಒಂದಿಷ್ಟು ವಿಚಾರಗಳನ್ನು ತಿಳಿದುಕೊಳ್ಳೋಣ.
Photo Credit: Pexels
ಹೆಚ್ಚು ಜನರಿಗೆ ತಿಳಿದಿರದ ಸಂವಿಧಾನದ ಕುರಿತಾದ ಎಂಟು ಫ್ಯಾಕ್ಟ್‌ಗಳನ್ನು ಇಲ್ಲಿ ನೀಡಲಾಗಿದೆ.
Photo Credit: Pexels
ಭಾರತದ ಸಂವಿಧಾನವು ವಿಶ್ವದ ಅತ್ಯಂತ ದೀರ್ಘವಾದ ಲಿಖಿತ ಸಂವಿಧಾನವಾಗಿದೆ.
Photo Credit: Pexels
ಭಾರತದ ಸಂವಿಧಾನ ಜಾರಿಯಾದ ಸಮಯದಲ್ಲಿ ಮೂಲತಃ 395 ಅನುಚ್ಛೇದಗಳು, 22 ಭಾಗಗಳು ಮತ್ತು 8 ಅನುಸೂಚಿಗಳನ್ನು ಹೊಂದಿತ್ತು.
Photo Credit: Flickr
ಇತರೆ ದಾಖಲೆಗಳಿಗಿಂತ ಭಿನ್ನವಾಗಿ ಭಾರತದ ಸಂವಿಧಾನವನ್ನು ಕೈಬರಹದಲ್ಲಿ ಬರೆಯಲಾಗಿದೆ. ಇದನ್ನು ಟೈಪ್ ಸೆಟ್‌ನಲ್ಲಿ ಬರೆಯಲಾಗಿಲ್ಲ.
Photo Credit: Pexels
ಭಾರತದ ಸಂವಿಧಾನವನ್ನು ಇಂಗ್ಲಿಷ್ ಮತ್ತು ಹಿಂದಿ ಎರಡೂ ಭಾಷೆಯಲ್ಲೂ ಬರೆಯಲಾಗಿದೆ. ಇದು ಸುಮಾರು 90,000 ಪದಗಳನ್ನು ಒಳಗೊಂಡಿದೆ.
Photo Credit: Pexels
ಆಚಾರ್ಯ ನಂದಲಾಲ್ ಬೋಸ್ ಅವರ ಮಾರ್ಗದರ್ಶನದಲ್ಲಿ ಶಾಂತಿನಿಕೇತನದ ಕಲಾವಿದರು ಸಂವಿಧಾನವನ್ನು ಎಚ್ಚರಿಕೆಯಿಂದ ಬರೆದರು.
Photo Credit: Pexels
ಸಂವಿಧಾನದ ಕ್ಯಾಲಿಗ್ರಫಿಯನ್ನು ದೆಹಲಿಯಲ್ಲಿ ಪ್ರೇಮ್ ಬಿಹಾರಿ ನಾರಾಯಣ್ ರೈಜಾಡಾ ಮಾಡಿದ್ದಾರೆ.
Photo Credit: Pexels
ಭಾರತದ ಸಂವಿಧಾನದ ಮೂಲ ಪ್ರತಿಗಳಿಗೆ ಯಾವುದೇ ಹಾನಿಯಾಗದಂತೆ ರಕ್ಷಿಸಲು ಭಾರತದ ಸಂಸತ್ತಿನ ಗ್ರಂಥಾಲಯದಲ್ಲಿ ವಿಶೇಷ ಹೀಲಿಯಂ ತುಂಬಿದ ಚೀಲಗಳಲ್ಲಿ ಇಡಲಾಗುತ್ತದೆ.
Photo Credit: File Photo
ಸಂವಿಧಾನದ ಪ್ರತಿಯೊಂದು ಭಾಗದಲ್ಲಿಯೂ ಭಾರತದ ರಾಷ್ಟ್ರೀಯ ಇತಿಹಾಸದ ದೃಶ್ಯಗಳನ್ನು ತಿಳಿಸುವ ಚಿತ್ರಗಳನ್ನು ಒಳಗೊಂಡಿದೆ.
Photo Credit: File Photo
ಮದುಮಗಳಂತೆ ಸಿಂಗಾರಗೊಂಡ ನಿರೂಪಕಿ ಚೈತ್ರಾ ವಾಸುದೇವನ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ