ಕುಟುಂಬದೊಂದಿಗೆ ಮನೆಯಲ್ಲೇ ಗಣರಾಜ್ಯೋತ್ಸವ ರಿಸಲು ಐಡಿಯಾಗಳು

By Rakshitha Sowmya
Jan 21, 2025

Hindustan Times
Kannada

26 ಜನವರಿ 1950 ರಂದು ಭಾರತ ಸಂವಿಧಾನ ಜಾರಿಗೆ ಬಂದ ದಿನವನ್ನು ಗಣರಾಜ್ಯೋತ್ಸವವನ್ನಾಗಿ ಆಚರಿಸುತ್ತೇವೆ

ಈ ವಿಶೇಷ ದಿನವನ್ನು ನೀವು ನಿಮ್ಮ ಮನೆಯಲ್ಲೇ ಕುಟುಂಬದವರ ಜೊತೆ ಸೇರಿ ಆಚರಿಸಬಹುದು

ಮನೆ ಮಂದಿ ಎಲ್ಲಾ ಕುಳಿತು ದೆಹಲಿಯ ಕರ್ತವ್ಯಪಥದಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್‌ ವೀಕ್ಷಿಸಿ

ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ನೀವು ವಿವಿಧ ಸಾಂಸ್ಕತಿಕ ಕಾರ್ಯಕ್ರಮ, ಮಾರ್ಚ್‌ಫಾಸ್ಟ್‌, ಸ್ತಬ್ದಚಿತ್ರಗಳನ್ನು ವೀಕ್ಷಿಸಬಹುದು

ಪೆರೇಡ್‌ ನಂತರ ಆ ದಿನ ವಿವಿಧ ವಾಹಿನಿಗಳಲ್ಲಿ ದೇಶಭಕ್ತಿಗೀತೆಗಳು, ಸಿನಿಮಾಗಳು, ಕಾರ್ಯಕ್ರಮಗಳು ಪ್ರಸಾರವಾಗುತ್ತವೆ, ನಿಮ್ಮ ಮಕ್ಕಳೊಂದಿಗೆ ವೀಕ್ಷಿಸಿ

ಕನ್ನಡದಲ್ಲಿ ವಂದೇ ಮಾತರಂ, ಮುತ್ತಿನ ಹಾರ, ವೀರಪ್ಪ ನಾಯಕ, ಹಿಂದಿಯಲ್ಲಿ ಬಾರ್ಡರ್‌, ಸರ್ದಾರ್‌ ಉಧಾಮ್‌ ಸಿಂಗ್‌ ಕಾರ್ಗಿಲ್‌  ಸೇರಿದಂತೆ ವಿವಿಧ ದೇಶಭಕ್ತಿ ಸಿನಿಮಾಗಳನ್ನು ನೋಡಬಹುದು

ಗಣರಾಜ್ಯೋತ್ಸವದಂದು ಕೆಲವರು ನೇರವಾಗಿ ದೆಹಲಿಗೆ ಹೋಗುತ್ತಾರೆ, ಆದರೆ ಅಲ್ಲಿವರೆಗೂ ಹೋಗಲು ಸಾಧ್ಯವಾಗದಿದ್ದರೆ ನೀವು ಸುತ್ತಮುತ್ತ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು

ಪ್ರಮುಖ ನಗರಗಳಲ್ಲಿ ಗಣರಾಜ್ಯೋತ್ಸವ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ, ನಿಮ್ಮ ಕುಟುಂಬದ ಜೊತೆ ಸೇರಿ ಈ ಸ್ಥಳಗಳಿಗೆ ಹೋಗಿ ಬನ್ನಿ

ನಿಮಗೆ ಕಲೆಯಲ್ಲಿ ಆಸಕ್ತಿ ಇದ್ದರೆ ದೇಶಕ್ಕೆ ಸಂಬಂಧಿಸಿದ ಪೇಂಟಿಂಗ್ ಮಾಡಿ, ಕವಿತೆಗಳನ್ನು ಬರೆಯಿರಿ

ಮಕ್ಕಳಿಗೆ ತ್ರಿವರ್ಣ ಧ್ವಜದ ಪೇಂಟಿಂಗ್‌ ಮಾಡಿಸಿ, ಬಾವುಟದ ಬ್ಯಾಡ್ಜ್‌ ಮಾಡುವುದನ್ನು ಹೇಳಿಕೊಡಿ, ಗಣರಾಜ್ಯೋತ್ಸವದ ಮಹತ್ವವನ್ನು ಅವರಿಗೆ ವಿವರಿಸಿ

 ಪ್ರೀತಿಪಾತ್ರರೊಂದಿಗೆ ಸೇರಿ ತ್ರಿವರ್ಣ ಡಿಶ್‌ಗಳನ್ನು ತಯಾರಿಸಿ, ಅದು ಸಿಹಿ ಆಗಿರಬಹುದು, ರಾಯತಾ ಅಥವಾ ಸ್ಯಾಂಡ್‌ವಿಚ್‌ ಆಗಿರಬಹುದು, ಅದರಲ್ಲಿ ನಿಮ್ಮ ಪ್ರತಿಭೆ ತೋರಿಸಿ

ಭಾರತದಲ್ಲಿ ತೋಟಗಾರಿಕೆ ಬೆಳೆಗಳ ಬಂಪರ್‌