ಮಕ್ಕಳೊಂದಿಗೆ ಮಕ್ಕಳಾಗಿ ಗಣರಾಜ್ಯೋತ್ಸವ ಆಚರಿಸಿ, ಈ 5 ಟಿಪ್ಸ್ ಪಾಲಿಸಿ
PEXELS
By Reshma Jan 18, 2025
Hindustan Times Kannada
ನಮ್ಮ ದೇಶದ ಬಗ್ಗೆ ಹೆಮ್ಮೆ, ಗೌರವ ಹೆಚ್ಚುವಂತೆ ಮಾಡಲು ಪ್ರತಿ ಪೋಷಕರು ಮಕ್ಕಳಿಗೆ ಗಣರಾಜ್ಯೋತ್ಸವದ ಮಹತ್ವ ತಿಳಿಸಬೇಕು. ಗಣರಾಜ್ಯೋತ್ಸವ ಸಂದರ್ಭ ವಿವಿಧ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಮಾಡಿ ಅವರಲ್ಲಿ ದೇಶಭಕ್ತಿ ಹೆಚ್ಚಿಸಬಹುದು
PEXELS
ಮಕ್ಕಳೊಂದಿಗೆ ಗಣರಾಜ್ಯೋತ್ಸವ ಆಚರಿಸಲು ಇಲ್ಲಿವೆ 5 ಸೃಜನಶೀಲ ಮಾರ್ಗಗಳು
UNSPLASH
ಕರಕುಶಲ ವಸ್ತುಗಳು, ಒಗಟುಗಳು, ವರ್ಕ್ ಶೀಟ್‌ಗಳು ಮತ್ತು ಫ್ಲ್ಯಾಶ್ ಕಾರ್ಡ್‌ಗಳಿಂದ ತುಂಬಿರುವ ಈ ಥೀಮ್ ಬಾಕ್ಸ್ ಸೃಜನಶೀಲತೆ ಮತ್ತು ದೇಶಭಕ್ತಿಯನ್ನು ಪ್ರೇರೇಪಿಸಲು ಮೋಜಿನ ಮತ್ತು ಸಂವಾದಾತ್ಮಕ ಮಾರ್ಗವಾಗಿದೆ
PINTEREST
ಭಾರತದ ರಾಜ್ಯಗಳು, ಹೆಗ್ಗುರುತುಗಳು ಮತ್ತು ಸಾಂಸ್ಕೃತಿಕ ಗುರುತುಗಳ ಬಗ್ಗೆ ಒಗಟು, ಪ್ರಶ್ನೆಗಳನ್ನು ಕೇಳಿ. ಈ ಚಟುವಟಿಕೆಯು ಮಕ್ಕಳಲ್ಲಿ ದೇಶದ ಬಗ್ಗೆ, ಇಲ್ಲಿನ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಲು ನೆರವಾಗುತ್ತದೆ
PINTEREST
ಭಾರತದ ಐತಿಹಾಸಿಕ ಹಿನ್ನೆಲೆಗಳನ್ನು ತಿಳಿದುಕೊಳ್ಳಲು ನಾಣ್ಯಗಳ ಸಂಗ್ರಹ, ಹಳೆ ಪೇಪರ್ ಕಟ್ಟಿಂಗ್‌ಗಳ ಸಂಗ್ರಹ, ಟೋಕನ್, ಸ್ಟ್ಯಾಂಪ್‌ಗಳ ಸಂಗ್ರಹವನ್ನೂ ಮಾಡಬಹುದು. ಇದರಿಂದ ಭಾರತದ ಪರಂಪರೆಗಳ ಬಗ್ಗೆ ಮಕ್ಕಳಿಗೆ ಕಲಿಸಿದಂತಾಗುತ್ತದೆ
PEXELS
ಈ ವಿಜ್ಞಾನ ಪ್ರಯೋಗ ಕಿಟ್ ಮಕ್ಕಳಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರವನ್ನು ಮೋಜಿನ ಮತ್ತು ಸಂವಾದಾತ್ಮಕ ರೀತಿಯಲ್ಲಿ ಅನ್ವೇಷಿಸಲು ಅನುವು ಮಾಡಿಕೊಡುತ್ತದೆ, ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲು ಉತ್ತಮ ಕಲ್ಪನೆಯಾಗಿ ಕಾರ್ಯನಿರ್ವಹಿಸುತ್ತದೆ
PEXELS
ಈ ಗಣರಾಜ್ಯೋತ್ಸವದ ಚಟುವಟಿಕೆಯು ಮಕ್ಕಳಿಗೆ ಚಾರ್ಮಿನಾರ್ ಮತ್ತು ಕುತುಬ್ ಮಿನಾರ್‌ನಂತಹ ಭಾರತೀಯ ವಾಸ್ತುಶಿಲ್ಪದ ಅದ್ಭುತಗಳನ್ನು ಅನ್ವೇಷಿಸಲು ಅತ್ಯುತ್ತಮ ಮಾರ್ಗವಾಗಿದೆ