ಗಣರಾಜ್ಯೋತ್ಸವ ಕುರಿತ ಕೆಲವು ಆಸಕ್ತಿದಾಯಕ ವಿಚಾರಗಳಿವು 

PC: Canva

By Reshma
Jan 24, 2025

Hindustan Times
Kannada

ಸಂವಿಧಾನದ ಅಂಗೀಕಾರ ಮತ್ತು ಭಾರತ  ಗಣತಂತ್ರ ರಾಜ್ಯವಾಗಿ ಪರಿವರ್ತನೆಯಾದ ಗೌರವಾರ್ಥ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಈ ದಿನದ ಕುರಿತ ಕೆಲವು ಆಸಕ್ತಿದಾಯಕ ವಿಚಾರಗಳಿವು 

ಬ್ರಿಟಿಷ್ ವಸಾಹತುಶಾಹಿ ಕಾಯಿದೆಯನ್ನು ರದ್ದುಗೊಳಿಸಿ ಭಾರತ ಸರ್ಕಾರವು ಸಂವಿಧಾನವನ್ನು ಜಾರಿಗೊಳಿಸಿತು

PC: Canva

ಭಾರತದ ಮೊದಲ ರಾಷ್ಟ್ರಪತಿ ಡಾ ರಾಜೇಂದ್ರ ಪ್ರಸಾದ್ ಅವರು 1950 ಜನವರಿ 26 ರಂದು ಧ್ವಜಾರೋಹಣ ಮಾಡುವ ಮೂಲಕ ಗಣರಾಜ್ಯೋತ್ಸವ ಆಚರಣೆಗೆ ಚಾಲನೆ ನೀಡಿದರು 

1950ರಲ್ಲಿ ಮೇಜರ್ ಧ್ಯಾನ್ ಚಂದ್ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಉದ್ಘಾಟನಾ ಮೆರವಣಿಗೆ ನಡೆಯಿತು. 100ಕ್ಕೂ ಹೆಚ್ಚು ವಿಮಾನಗಳು ಹಾಗೂ 3000 ಭಾರತೀಯ ಸೈನಿಕರು ಪಾಲ್ಗೊಂಡಿದ್ದರು

PC: Canva

ಇಂಡೋನೇಷ್ಯಾ ಅಧ್ಯಕ್ಷ ಸುಕರ್ನೋ ಅವರು ಭಾರತದ ಮೊದಲ ಗಣರಾಜ್ಯೋತ್ಸವ ಪೆರೇಡ್‌ನ ಅತಿಥಿಯಾಗಿದ್ದರು

ಪೆರೇಡ್ ಅನ್ನು ಸಾಂಪ್ರದಾಯಿಕವಾಗಿ ರಾಜಪಥದಲ್ಲಿ ನಡೆಸಲಾಗುತ್ತದೆ. ಒಮ್ಮೆ ಪಾಕಿಸ್ತಾನದ ಗರ್ವನರ್ ಜನರಲ್ ಮಲಿಕ್ ಗುಲಾಮ್ ಮುಹಮ್ಮದ್‌ ಪೆರೇಡ್‌ನ ಮುಖ್ಯ ಅತಿಥಿಯಾಗಿದ್ದರು 

PC: Canva

ಬೀಟಿಂಗ್ ರಿಟ್ರೀಟ್ ಸಮಾರಂಭವು 1600ರ ಸಂಪ್ರದಾಯದ ಬೇರುಗಳನ್ನು ಹೊಂದಿದೆ. ಪ್ರತಿವರ್ಷ ಜನವರಿ 29ರಂದು ದೆಹಲಿಯ ವಿಜಯ್‌ ಚೌಕ್‌ನಲ್ಲಿ ಬೀಟಿಂಗ್ ರಿಟ್ರೀಟ್ ನಡೆಯುತ್ತದೆ 

‘ಸುವರ್ಣ ಭಾರತ: ಪರಂಪರೆ ಮತ್ತು ಪ್ರಗತಿ‘ ಎನ್ನುವುದು 2025ರ ಗಣರಾಜ್ಯೋತ್ಸವ ಥೀಮ್ ಆಗಿದೆ

PC: Canva

2025 ರ ಗಣರಾಜ್ಯೋತ್ಸವಕ್ಕೆ, ಆಂಧ್ರಪ್ರದೇಶ, ಬಿಹಾರ, ಚಂಡೀಗಢ, ಗೋವಾ, ಗುಜರಾತ್, ಹರಿಯಾಣ, ಜಾರ್ಖಂಡ್, ಕರ್ನಾಟಕ ಮತ್ತು ಮಧ್ಯಪ್ರದೇಶ ಸೇರಿದಂತೆ 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಟ್ಯಾಬ್ಲೋಗಳು ಕರ್ತವ್ಯ ಪಥ ಮೆರವಣಿಗೆಯಲ್ಲಿ ಕಾಣಿಸಿಕೊಳ್ಳಲಿವೆ

ಜನವರಿ 26, 2025 ರಂದು ನಡೆಯಲಿರುವ ಗಣರಾಜ್ಯೋತ್ಸವಕ್ಕೆ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ 

ಅರಿಶಿನದಲ್ಲಿ ಮಿಂದೆದ್ದ ನಟ ಧನಂಜಯ್ ಮತ್ತು ಧನ್ಯತಾ; ಹಳದಿ ಶಾಸ್ತ್ರ ಫೋಟೋಸ್‌