AP
ಅಶುತೋಷ್ ಗೋವಾರಿಕರ್ ಅವರ ಲಗಾನ್ ಚಿತ್ರದಲ್ಲಿ ಅಮೀರ್ ಖಾನ್ ಭುವನ್ ಪಾತ್ರದಲ್ಲಿ ನಟಿಸಿದ್ದಾರೆ. ಕ್ರಿಕೆಟ್ ಮೂಲಕ ಬ್ರಿಟಿಷ್ ತೆರಿಗೆಗಳ ವಿರುದ್ಧ ಗ್ರಾಮಸ್ಥರನ್ನು ಒಂದುಗೂಡಿಸುತ್ತಾರೆ. ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ನೋಡಬಹುದು.
ರಾಕೇಶ್ ಓಂಪ್ರಕಾಶ್ ಮೆಹ್ರಾ ಅವರ 2006ರ ಚಲನಚಿತ್ರ "ರಂಗ್ ದೇ ಬಸಂತಿ"ಯೂ ದೇಶಭಕ್ತಿ ಸಾರುವ ಸಿನಿಮಾ. ಭ್ರಷ್ಟಾಚಾರದಿಂದಾಗಿ ವಾಯುಪಡೆಯ ಪೈಲಟ್ ಮೃತಪಟ್ಟ ಬಳಿಕ ಅಮೀರ್ ಖಾನ್ ಮತ್ತು ಸ್ನೇಹಿತರು ನ್ಯಾಯಕ್ಕಾಗಿ ಹೋರಾಡುತ್ತಾರೆ. ನೆಟ್ ಫ್ಲಿಕ್ಸ್‌ನಲ್ಲಿದೆ.
ಶಿಮಿತ್ ಅಮೀನ್ ನಿರ್ದೇಶನದ 2007ರ ಈ ಸಿನಿಮಾದಲ್ಲಿ ಶಾರುಖ್ ಖಾನ್ ಭಾರತದ ಬಾಲಕಿಯರ ಹಾಕಿ ತಂಡದ ತರಬೇತುದಾರನಾಗಿ ನಟಿಸಿದ್ದಾರೆ. ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ವಿಷ್ಣುವರ್ಧನ್ ಅವರ ಚೊಚ್ಚಲ ಚಿತ್ರ. ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಜೀವನಚರಿತ್ರೆ ಡ್ರಾಮಾ ಇದಾಗಿದೆ. 2021ರಲ್ಲಿ ಅಮೆಜಾನ್ ಪ್ರೈಮ್ ವಿಡಿಯೋ ಇಂಡಿಯಾದಲ್ಲಿ ಬಿಡುಗಡೆಯಾಯಿತು.
ಮೇಘನಾ ಗುಲ್ಜಾರ್ ಅವರ 2018ರ ಚಿತ್ರದಲ್ಲಿ ಆಲಿಯಾ ಭಟ್ ಗೂಢಚಾರಿಯಾಗಿ ನಟಿಸಿದ್ದಾರೆ. ಮಿಲಿಟರಿ ಪಿತೂರಿಗಳನ್ನು ಬಹಿರಂಗಪಡಿಸಲು ಪಾಕಿಸ್ತಾನಿ ಸೈನಿಕನನ್ನು ವಿವಾಹವಾಗುತ್ತಾರೆ. ಅಮೆಜಾನ್ ಪ್ರೈಮ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
File