ಕಂಬ್ಯಾಕ್ ಪಂದ್ಯದಲ್ಲೇ ರಿಷಭ್ ಪಂತ್ ವಿಶೇಷ ದಾಖಲೆ

By Prasanna Kumar P N
Mar 23, 2024

Hindustan Times
Kannada

449 ದಿನಗಳ ನಂತರ ಕ್ರಿಕೆಟ್ ಮೈದಾನಕ್ಕೆ ರಿಷಭ್ ಪಂತ್ ಮರಳಿದ್ದಾರೆ. ಆದರೆ ಪುನರಾಗಮನದ ಪಂತ್ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೋತಿತು.

ಪಂದ್ಯದ ಸೋತರೂ ತಮ್ಮ ಕಂಬ್ಯಾಕ್ ಪಂದ್ಯದಲ್ಲಿ 2 ಬೌಂಡರಿ ಸಿಡಿಸಿ ವಿಶೇಷ ಮೈಲುಗಲ್ಲೊಂದನ್ನು ತಲುಪಿದ್ದಾರೆ.

ಟಿ20 ಕ್ರಿಕೆಟ್ ಇತಿಹಾಸದಲ್ಲಿ​ 400 ಬೌಂಡರಿಗಳನ್ನು ಪೂರ್ಣಗೊಳಿಸಿ ದಾಖಲೆ ಬರೆದರು. ಪಂತ್ ಐಪಿಎಲ್​ನಲ್ಲಿ 264 ಬೌಂಡರಿ ಸಿಡಿಸಿದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ಧ ಕಣಕ್ಕಿಳಿದ ಪಂತ್, 13 ಎಸೆತಗಳಲ್ಲಿ 2 ಬೌಂಡರಿ ಸಹಿತ 18 ರನ್ ಗಳಿಸಿದರು.

2022ರ ಡಿಸೆಂಬರ್​ 30ರಂದು ರಿಷಭ್​ ಭೀಕರ ಕಾರು ಅಪಘಾತಕ್ಕೆ ಒಳಗಾಗಿದ್ದರು. ಅಂದಿನಿಂದ ಇಲ್ಲಿಯವರೆಗೂ ಅವರು ಕ್ರಿಕೆಟ್ ಆಡಿರಲಿಲ್ಲ.

ಮಲಬದ್ಧತೆ ನಿವಾರಣೆಗೆ ಇಲ್ಲಿದೆ 8 ಸರಳ ಪರಿಹಾರ 

Image Credits : pexels