ರೋಹಿತ್​-ಹಾರ್ದಿಕ್​ ಒಟ್ಟಿಗೆ ಮೋಜು ಮಸ್ತಿ, ವಿಡಿಯೋ

By Prasanna Kumar P N
Apr 06, 2024

Hindustan Times
Kannada

ತನ್ನ ನಾಲ್ಕನೇ ಪಂದ್ಯಕ್ಕೂ ಮುನ್ನ ಆರು ದಿನಗಳ ಬಿಡುವು ಪಡೆದಿದ್ದ ಮುಂಬೈ ಇಂಡಿಯನ್ಸ್​​, ಗುಜರಾತ್​ನ ಜಾಮ್​ನಗರಕ್ಕೆ ಕಿರು ಪ್ರವಾಸ ಕೈಗೊಂಡಿತ್ತು.

Mumbai Indians Instagram

ಈ ವೇಳೆ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಮಾಜಿ ನಾಯಕ ರೋಹಿತ್ ಶರ್ಮಾ ಸೇರಿ ತಂಡದ ಆಟಗಾರರು ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ.

ಈ ವಿಡಿಯೋವನ್ನು ಮುಂಬೈ ಇಂಡಿಯನ್ಸ್ ತನ್ನ ಅಧಿಕೃತ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ವೈರಲ್ ಆಗುತ್ತಿದೆ.

ಏಪ್ರಿಲ್ 1ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲಿನ ಬಳಿಕ ಎಂಐ​ ತಂಡದ ಆಟಗಾರರು ಗುಜರಾತ್​ಗೆ ತೆರಳಿದ್ದರು. 

ಈ ವಿಡಿಯೋದಲ್ಲಿ ರೋಹಿತ್-ಹಾರ್ದಿಕ್ ಒಬ್ಬರನ್ನೊಬ್ಬರು ಖುಷಿಯಿಂದ ತಬ್ಬಿಕೊಳ್ಳುವುದನ್ನು ಕಾಣಬಹುದು. ಉಳಿದ ಆಟಗಾರರು ಸಹ ಜಲ ಕ್ರೀಡೆಯಲ್ಲಿ ಆನಂದಿಸುತ್ತಿದ್ದರು.

ಡೆಲ್ಲಿ ಮತ್ತು ಮುಂಬೈ ತಂಡಗಳು ಏಪ್ರಿಲ್ 7ರಂದು ವಾಂಖೆಡೆ ಮೈದಾನದಲ್ಲಿ ಸೆಣಸಾಟ ನಡೆಸಲಿವೆ.

ಈ ದಿನಾಂಕದಂದು ಜನಿಸಿದ ಹುಡುಗಿಯರು ಸುಲಭವಾಗಿ ಪ್ರೀತಿ ಪಡೆಯುವುದಿಲ್ಲ