Rohit Sharma: ಡಕೌಟ್​​ ಆಗುವುದರಲ್ಲೂ ರೋಹಿತ್ ಶರ್ಮಾ ದಾಖಲೆ

By Prasanna Kumar P N
Sep 16, 2023

Hindustan Times
Kannada

ಏಷ್ಯಾಕಪ್​​ನಲ್ಲಿ ಬಾಂಗ್ಲಾದೇಶ ವಿರುದ್ಧ ಸೂಪರ್-4ರ ಪಂದ್ಯದಲ್ಲಿ ಗೋಲ್ಡನ್ ಡಕೌಟ್​ ಆಗಿ ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ್ದಾರೆ.

ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಶುಕ್ರವಾರ (ಸೆ.15) ನಡೆದ ಪಂದ್ಯದಲ್ಲಿ ರೋಹಿತ್ ತಾನು ಎದುರಿಸಿದ 2ನೇ ಎಸೆತದಲ್ಲೇ ವೇಗಿ ತಂಝಿಮ್ ಹಸನ್ ಶಕಿಬ್‌ಗೆ ಡಕೌಟ್ ಆಗಿ ಹೊರ ನಡೆದರು.

ರೋಹಿತ್ ತಮ್ಮ ಏಕದಿನ ವೃತ್ತಿಜೀವನದಲ್ಲಿ 15 ಬಾರಿ ಶೂನ್ಯಕ್ಕೆ ಡಕೌಟ್ ಆಗಿದ್ದಾರೆ. ಆ ಮೂಲಕ ವಿರಾಟ್ ಕೊಹ್ಲಿ (15 ಬಾರಿ) ಹೆಸರಿನಲ್ಲಿದ್ದ ಅನಗತ್ಯ ದಾಖಲೆ ಸಮಗೊಳಿಸಿದ್ದಾರೆ.

ಇನ್ನು ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ 20 ಬಾರಿ ಗೋಲ್ಡನ್ ಡಕೌಟ್​ ಆಗಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಸಚಿನ್ ತೆಂಡೂಲ್ಕರ್- 20 ಬಾರಿ

ಜಾವಗಲ್ ಶ್ರೀನಾಥ್- 19 ಬಾರಿ

ಅನಿಲ್ ಕುಂಬ್ಳೆ-18 ಬಾರಿ

ಯುವರಾಜ್ ಸಿಂಗ್ ಮತ್ತು ಹರ್ಭಜನ್ ಸಿಂಗ್ ತಲಾ 17 ಬಾರಿ

ಸೌರವ್ ಗಂಗೂಲಿ- 16 ಬಾರಿ

ವಿರಾಟ್‌ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಲಾ 15 ಬಾರಿ

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS