ರೋಹಿತ್​ ಶರ್ಮಾ ಬರ್ತ್​ಡೇ; ಹಿಟ್​ಮ್ಯಾನ್ ಎಷ್ಟು ಕೋಟಿಗೆ ಒಡೆಯ?

By Prasanna Kumar P N
Apr 30, 2024

Hindustan Times
Kannada

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಏಪ್ರಿಲ್ 30 ರಂದು ತಮ್ಮ 37ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ರೋಹಿತ್ ಶರ್ಮಾ ಜನ್ಮದಿನದ ಹಿನ್ನೆಲೆ ಅವರ ಸಂಪತ್ತಿನ ಬಗ್ಗೆ ತಿಳಿದುಕೊಳ್ಳೋಣ.

ರೋಹಿತ್ ನಿವ್ವಳ ಮೌಲ್ಯ ಸುಮಾರು 214 ಕೋಟಿ. ವಾರ್ಷಿಕ ಒಪ್ಪಂದ, ಪಂದ್ಯದ ಶುಲ್ಕ, ಐಪಿಎಲ್ ಮತ್ತು ಜಾಹೀರಾತುಗಳ ಮೂಲಕ ಕೋಟಿ ಕೋಟಿ ದುಡಿಯುತ್ತಾರೆ.

ಬಿಸಿಸಿಐ ವಾರ್ಷಿಕ ಒಪ್ಪಂದದಿಂದ ಹಿಟ್​ಮ್ಯಾನ್ 7 ಕೋಟಿ ರೂ ಪಡೆಯುತ್ತಾರೆ. ಅವರು ಎ+ ವರ್ಗದಲ್ಲಿದ್ದಾರೆ.

ರೋಹಿತ್ ಟೆಸ್ಟ್ ಪಂದ್ಯ ಆಡಿದರೆ 15 ಲಕ್ಷ, 1 ಏಕದಿನ ಪಂದ್ಯಕ್ಕೆ 6 ಲಕ್ಷ, 1 ಟಿ20 ಪಂದ್ಯ 3 ಲಕ್ಷ ರೂಪಾಯಿ ಗಳಿಸುತ್ತಾರೆ.

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ರೋಹಿತ್, ಪ್ರತಿ ಸೀಸನ್​ಗೆ 16 ಕೋಟಿ ಪಡೆಯುತ್ತಾರೆ. ಇದುವರೆಗೆ ರೋಹಿತ್ ಐಪಿಎಲ್​ನಿಂದ 178 ಕೋಟಿ ಗಳಿಸಿದ್ದಾರೆ.

ರೋಹಿತ್ ಅನೇಕ ಬ್ರ್ಯಾಂಡ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಮುಂಬೈನಲ್ಲಿ 30 ಕೋಟಿ ಬೆಲೆ ಮನೆ ಇದೆ. ಐಷಾರಾಮಿ ಕಾರುಗಳು ಸಹ ಇವೆ.

ಸಚಿನ್-ವಿನೋದ್ ಕಾಂಬ್ಳಿ; ಟೆಸ್ಟ್ ಅಂಕಿಅಂಶ ಹೋಲಿಕೆ

Instagram