ಅತಿ ಹೆಚ್ಚು ಸಿಕ್ಸರ್​ ಸಿಡಿಸಿದವರು, ರೋಹಿತ್​ 2ನೇ ಸ್ಥಾನಕ್ಕೆ ಜಿಗಿತ!

By Prasanna Kumar P N
Feb 10, 2025

Hindustan Times
Kannada

ರೋಹಿತ್​ ಶರ್ಮಾ ಅತಿ ಹೆಚ್ಚು ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಇದೀಗ ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 90 ಎಸೆತಗಳಲ್ಲಿ 12 ಬೌಂಡರಿ, 7 ಸಿಕ್ಸರ್ 119 ರನ್ ಸಿಡಿಸಿ ದಾಖಲೆ ಬರೆದಿದ್ದಾರೆ.

ಪಂದ್ಯದಲ್ಲಿ ಮೊದಲ ಸಿಕ್ಸರ್ ಬಾರಿಸಿದ ಬೆನ್ನಲ್ಲೇ ಅವರು ಏಕದಿನ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದವರ ಪಟ್ಟಿಯಲ್ಲಿ ಕ್ರಿಸ್​ಗೇಲ್ ದಾಖಲೆ ಮುರಿದು 2ನೇ ಸ್ಥಾನಕ್ಕೇರಿದರು.

351 ಸಿಕ್ಸರ್ - ಶಾಹಿದ್ ಅಫ್ರಿದಿ (ಪಾಕಿಸ್ತಾನ)

338 ಸಿಕ್ಸರ್​ - ರೋಹಿತ್ ಶರ್ಮಾ* (ಭಾರತ)

331 ಸಿಕ್ಸರ್ -  ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್)

270 ಸಿಕ್ಸರ್ - ಸನತ್ ಜಯಸೂರ್ಯ (ಶ್ರೀಲಂಕಾ)

229 ಸಿಕ್ಸರ್ - ಎಂಎಸ್ ಧೋನಿ (ಭಾರತ)

220 ಸಿಕ್ಸರ್-  ಇಯಾನ್ ಮಾರ್ಗನ್ (ಇಂಗ್ಲೆಂಡ್)

IPL 2025: ಮತ್ತೊಂದು ದಾಖಲೆಯ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ