ರೋಹಿತ್​ ಶರ್ಮಾ ಆಸ್ತಿ ಮೌಲ್ಯ ಎಷ್ಟಿದೆ?

By Prasanna Kumar PN
May 09, 2025

Hindustan Times
Kannada

ಟೀಮ್ ಇಂಡಿಯಾ ಆರಂಭಿಕ ಆಟಗಾರ ರೋಹಿತ್​ ಶರ್ಮಾ ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ ಮಾತ್ರ ಅವರು ಮುಂದುವರೆಯಲಿದ್ದಾರೆ.

ಐಪಿಎಲ್ ಮಧ್ಯೆಯೇ ಇನ್​ಸ್ಟಾಗ್ರಾ ಸ್ಟೋರಿಯಲ್ಲಿ ನಿವೃತ್ತಿ ಕುರಿತು ಪೋಸ್ಟ್ ಹಂಚಿಕೊಂಡಿರುವ ರೋಹಿತ್​, ಆಸ್ತಿ ಮೌಲ್ಯ ಎಷ್ಟಿದೆ ಎಂಬ ಮಾಹಿತಿಯನ್ನು ತಿಳಿಯೋಣ.

ವರದಿಗಳ ಪ್ರಕಾರ ರೋಹಿತ್ ನಿವ್ವಳ ಮೌಲ್ಯ 218 ಕೋಟಿಗಳಾಗಿದ್ದು, ಭಾರತೀಯ ಕ್ರಿಕೆಟ್, ಐಪಿಎಲ್ ಒಪ್ಪಂದ, ಪಂದ್ಯಗಳ ಶುಲ್ಕ, ವಿವಿಧ ಬ್ರಾಂಡ್​ಗಳೊಂದಿಗೆ ಒಪ್ಪಂದಗಳಿಂದ ಆದಾಯ ಗಳಿಸಿದ್ದಾರೆ.

ಬಿಸಿಸಿಐ ವಾರ್ಷಿಕ ಒಪ್ಪಂದದಲ್ಲಿ ಎ ಪ್ಲಸ್ ಗ್ರೇಡ್ ಪಡೆದಿದ್ದಾರೆ. ಅವರು ಪ್ರತಿ ವರ್ಷ ಬಿಸಿಸಿಐನಿಂದ 7 ಕೋಟಿ ರೂ ವೇತನ ಪಡೆಯುತ್ತಾರೆ.

ಇದಲ್ಲದೆ, ಪಂದ್ಯಗಳ ಶುಲ್ಕವನ್ನೂ ಪಡೆಯುತ್ತಾರೆ. ಟೆಸ್ಟ್​​ನಲ್ಲಿ ಪ್ರತಿ ಪಂದ್ಯಕ್ಕೆ 15 ಲಕ್ಷ, ಏಕದಿನದಲ್ಲಿ ಪಂದ್ಯಕ್ಕೆ 7 ಲಕ್ಷ, ಟಿ20 ಕ್ರಿಕೆಟ್​​ನಲ್ಲಿ ಪ್ರತಿ ಪಂದ್ಯಕ್ಕೆ 3 ಲಕ್ಷ ಪಡೆಯುತ್ತಾರೆ.

ಐಪಿಎಲ್​​ನಲ್ಲೂ ಉತ್ತಮ ವೇತನ ಪಡೆಯುತ್ತಾರೆ. ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಅವರು 16.3 ಕೋಟಿ ರೂ ವೇತನ ಪಡೆಯುತ್ತಾರೆ.

ಅಡಿಡಾಸ್, ಕ್ರೆಟಾ, ರಸ್ನಾ, ಸ್ವಿಗ್ಗಿ, ಮ್ಯಾಕ್ಸ್​ ಲೈಫ್​ ಇನ್ಸುರೆನ್ಸ್ ಸೇರಿದಂತೆ ವಿವಿಧ ಕಂಪನಿಗಳೊಂದಿಗೆ ಅನುಮೋದನೆ ಪಡೆದಿದ್ದು, 5 ಕೋಟಿಗೂ ಹೆಚ್ಚು ಆದಾಯ ಗಳಿಸುತ್ತಾರೆ.

ಹಿಟ್​ಮ್ಯಾನ್ ಮುಂಬೈನ ವೊರ್ಲಿಯಲ್ಲಿ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ಇದರ ಬೆಲೆ 30 ಕೋಟಿಗೂ ಹೆಚ್ಚು. 

ರೋಹಿತ್​ ಶರ್ಮಾ ಅದ್ಭುತ ಕಾರ್​ ಕಲೆಕ್ಷನ್ ಕೂಡ ಹೊಂದಿದ್ದಾರೆ. ಎಲ್ಲವೂ ಐಷಾರಾಮಿಗಳೇ ಆಗಿರುವುದು ವಿಶೇಷ.

ಲ್ಯಾಂಬೋರ್ಗಿನಿ ಉರುಸ್ (4.18 ಕೋಟಿ ರೂ,) ಮರ್ಸಿಡೀಸ್ ಬೆಂಜ್ ಜೆಡ್ ಎಸ್​-ಕ್ಲಾಸ್ (1.5 ಕೋಟಿ), ಬಿಎಂಡಬ್ಲ್ಯು ಎಂ5 (1.79 ಕೋಟಿ ರೂ), ರೇಂಜ್ ರೋವರ್ ಹೆಚ್​​ಎಸ್​​​ಇ ಎಲ್​ಡಬ್ಲ್ಯಬಿ (2.80 ಕೋಟಿ) ಇವು ರೋಹಿತ್ ಹೊಂದಿರುವ ಕಾರುಗಳು.

ಬೇಸಿಗೆಯಲ್ಲಿ ಪುದಿನಾ, ಕೊತ್ತಂಬರಿ ಸೊಪ್ಪು ಬಾಡದಂತೆ ತಾಜಾವಾಗಿರಿಸಲು ಇಲ್ಲಿದೆ ಟಿಪ್ಸ್‌