9ನೇ ವಾರ ಯಾವೆಲ್ಲ ರಿಯಾಲಿಟಿ ಶೋಗಳು ಟಾಪ್‌ನಲ್ಲಿವೆ? ಅತಿ ಹೆಚ್ಚು ಟಿಆರ್‌ಪಿ ಗಿಟ್ಟಿಸಿಕೊಂಡ ಶೋ ಯಾವುದು? ಹೀಗಿದೆ ಉತ್ತರ

By Manjunath B Kotagunasi
Mar 14, 2025

Hindustan Times
Kannada

ಸರಿಗಮಪಕ್ಕೆ ಸಿಕ್ಕ ಟಿಆರ್‌ಪಿ ಎಷ್ಟು, ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2, ಮಜಾ ಟಾಕೀಸ್‌ ಮತ್ತು ಬಾಯ್ಸ್‌ ವರ್ಸಸ್‌ ಗರ್ಲ್ಸ್‌ಗೆ ಸಿಕ್ಕ ಟಿಆರ್‌ಪಿ ಎಷ್ಟು? ಇಲ್ಲಿದೆ ಮಾಹಿತಿ. 

ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಟಿಆರ್‌ಪಿಯಲ್ಲಿ ಕಮಾಲ್‌ ಮಾಡುತ್ತಿದೆ. ಅದರಂತೆ 9ನೇ ವಾರದ ಟಿಆರ್‌ಪಿಯಲ್ಲಿ ಒಳ್ಳೆಯ ನಂಬರ್‌ ಪಡೆದುಕೊಂಡಿದೆ. 

ರಾಜೇಶ್‌ ಕೃಷ್ಣನ್‌, ವಿಜಯ್‌ ಪ್ರಕಾಶ್, ಅರ್ಜುನ್‌ ಜನ್ಯ ತೀರ್ಪುಗಾರರಾಗಿರುವ ಈ ಶೋನಲ್ಲಿ ನಿರೂಪಕಿ ಅನುಶ್ರೀ ಸಹ ಪ್ರಮುಖ ಆಕರ್ಷಣೆ. 

9ನೇ ವಾರದ ಟಿಆರ್‌ಪಿಯಲ್ಲಿ ಸರಿಗಮಪ 9.5 ಟಿಆರ್‌ಪಿ ಪಡೆದಿದ್ದು, ನಾನ್‌ ಫಿಕ್ಷನ್‌ ವಿಭಾಗದಲ್ಲಿ ಈ ಶೋ ನಂಬರ್‌ 1 ಸ್ಥಾನದಲ್ಲಿ ಕೂತಿದೆ. 

ನಾನ್‌ ಫಿಕ್ಷನ್‌ ವಿಭಾಗದಲ್ಲಿ ಕೊನೇ ಸ್ಥಾನದಲ್ಲಿ ಉಳಿದಿರುವುದು ಮಜಾ ಟಾಕೀಸ್.‌ ಈ ಶೋ 9ನೇ ವಾರದ ಟಿಆರ್‌ಪಿಯಲ್ಲಿ 3.5 ರೇಟಿಂಗ್‌ ಪಡೆದುಕೊಂಡಿದೆ. 

ಬಾಯ್ಸ್‌ ವರ್ಸಸ್‌ ಗರ್ಲ್ಸ್‌ ಶೋ 9ನೇ ವಾರದ ಟಿಆರ್‌ಪಿಯಲ್ಲಿ 4.0 ಟಿಆರ್‌ಪಿ ಪಡೆದುಕೊಂಡಿದೆ. ನಾಲ್ಕು ಶೋಗಳ ಪೈಕಿ ಇದು ಮೂರನೇ ಸ್ಥಾನದಲ್ಲಿದೆ.

ಜೀ ಕನ್ನಡದ ಇನ್ನೊಂದು ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2 9ನೇ ವಾರದಲ್ಲಿ 7.6 ಟಿಆರ್‌ಪಿ ಪಡೆದುಕೊಂಡು ಎರಡನೇ ಸ್ಥಾನದಲ್ಲಿದೆ.

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS