ಜನದಟ್ಟಣೆ ಹೆಚ್ಚಿರುವ ಸ್ಥಳಗಳಲ್ಲಿ ಕಾಲ್ತುಳಿತ  ತಡೆಯಲು ಸುರಕ್ಷಿತಾ ಸಲಹೆಗಳಿವು

By Raghavendra M Y
Jul 03, 2024

Hindustan Times
Kannada

ಕಾಲ್ತುಳಿತ ಜನದಟ್ಟಣೆಯ ಸ್ಥಳಗಳಲ್ಲಿ ಹಠಾತ್ ಭಯಭೀತರಾದಾಗ ಉಂಟಾಗುವ ಘಟನೆ. ಈ ವೇಳೆ ನೂಕಾಟ, ತಳ್ಳಾಟ ಉಂಟಾಗುತ್ತೆ

ಉತ್ತರ ಪ್ರದೇಶದ ಹತ್ರಾಸ್‌ ಜಿಲ್ಲೆಯಲ್ಲಿ ಸತ್ಸಂಗ ಕಾರ್ಯಕ್ರಮದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠಿ 120 ಜನರು ಸಾವನ್ನಪ್ಪಿದ್ದಾರೆ

ಸಣ್ಣ ಜಾಗದಲ್ಲಿ ನೂರಾರು ಜನರು ಭಾಗವಹಿಸುವ ದೊಡ್ಡ ಕಾರ್ಯಕ್ರಮಕ್ಕೆ ಭೇಟಿ ನೀಡುವ ಮೊದಲು ಸುರಕ್ಷತೆಗೆ ಆದ್ಯತೆ ನೀಡುವುದು ಬಹಳ ಮುಖ್ಯ

ಕಾರ್ಯಕ್ರಮಗಳಲ್ಲಿ ಕಾಲ್ತುಳಿತವನ್ನು ತಪ್ಪಿಸಲು ಕೆಲವು ಸುರಕ್ಷತಾ ಸಲಹೆಗಳು ಇಲ್ಲಿವೆ

ನೀವು ಕಾರ್ಯಕ್ರಮದ ಸ್ಥಳ ತಲುಪಿದ ತಕ್ಷಣ ಅಲ್ಲಿರುವ ನಿರ್ಗಮನ ದ್ವಾರಗಳನ್ನು ತಿಳಿದುಕೊಳ್ಳಿ. ಕಡಿಮೆ ಜನರು ಬಳಸುವ ಪರ್ಯಾಯ ನಿರ್ಗಮನದ ಬಗ್ಗೆ ತಿಳಿದರೆ ಇನ್ನೂ ಒಳ್ಳೆಯದು

ಆದಷ್ಟು ಬೇಗ ಹೊರಡಿ-ನಿಮ್ಮ ಸುತ್ತಲೂ ಜನಸಂದಣಿ ಹೆಚ್ಚಿದ್ದಾಗ ಸ್ಥಳಾವಕಾಶ ಕಡಿಮೆಯಾಗುತ್ತಿದೆ ಎಂದು ನೀವು ಭಾವಿಸಿದರೆ ಕಾರ್ಯಕ್ರಮ ಪ್ರಾರಂಭವಾದರೂ ತಕ್ಷಣವೇ ಅಲ್ಲಿಂದ ಹೊರಡಿ

ಕಡಿಮೆ ಸ್ಥಳದಲ್ಲಿ ಹೆಚ್ಚು ಜನರು ಸೇರಿರುವ ಕಾರ್ಯಕ್ರಮದಲ್ಲಿ ಬೇಗ ಅಲ್ಲಿಂದ ಹೊರಟರೆ ಒಟ್ಟಿಗೆ ಹೊರಡುವ ಜನಸಮೂಹದ ಕಾಲ್ತುಳಿತದಿಂದ ಆಗುವ ಅಪಾಯ ತಪ್ಪಿಸಬಹುದು

ಭೀತಿಗೊಳ್ಳಬೇಡಿ - ಜನಸಂದಣಿಯ ನಡುವೆ ಭಯಭೀತರಾಗುವುದು ಇತರರಲ್ಲಿ ಆತಂಕಕ್ಕೆ ಕಾರಣವಾಗಬಹುದು. ಇದು ವಿಪರೀತ ಮತ್ತು ಕಾಲ್ತುಳಿತದಂತಹ ಪರಿಸ್ಥಿತಿಗೆ ಕಾರಣವಾಗುತ್ತೆ

ಸಹಾಯ ಕೇಳಿ-ಕಾಲ್ತುಳಿತ ವೇಳೆ ನೀವು ಅಪಾಯಕಾರಿ ಪರಿಸ್ಥಿತಿಯಲ್ಲಿದ್ದರೆ, ಸಹಾಯಕ್ಕಾಗಿ ಕೂಗಿ, ನಿಮ್ಮ ಕಾಲುಗಳ ಮೇಲೆ ನಿಲ್ಲಿ, ಶಾಂತವಾಗಿರಿ, ಗಾಳಿ ತೆಗೆದುಕೊಳ್ಳಲು ಪ್ರಯತ್ನಿಸಿ

ಅಶುತೋಷ್ ಶರ್ಮಾ ಐತಿಹಾಸಿಕ ಸಾಧನೆ