ಬಾಲಿವುಡ್ ನಟ ಸೈಫ್ ಅಲಿ ಖಾನ್ ಸಂಪತ್ತು ಎಷ್ಟಿರಬಹುದು

Pinterest

By Umesh Kumar S
Jan 16, 2025

Hindustan Times
Kannada

ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಜನವರಿ 16 ನಸುಕಿನಲ್ಲಿ ಅಪರಿಚಿತನೊಬ್ಬ ಹಲ್ಲೆ ನಡೆಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. 

Pinterest

ಸದ್ಯ ಸುದ್ದಿಯಲ್ಲಿರುವ ಬಾಲಿವುಡ್ ನವಾಬ ಸೈಫ್ ಅಲಿ ಖಾನ್ ಅವರ ಸಂಪತ್ತಿನ ಮೌಲ್ಯ ಎಷ್ಟಿರಬಹುದು ನೋಡೋಣ

Pinterest

ಸಿಎನ್ಬಿಸಿ ಟಿವಿ 18 ಪ್ರಕಾರ, 2023 ರಲ್ಲಿ ಸೈಫ್ ಅಲಿ ಖಾನ್ ಅವರ ನಿವ್ವಳ ಮೌಲ್ಯವು ಸುಮಾರು 1,300 ಕೋಟಿ ರೂ ಎಂದು ಅಂದಾಜಿಸಲಾಗಿದೆ.

ಈ ಸಂಪತ್ತು ಅವರ ನಟನಾ ವೃತ್ತಿಜೀವನ, ಬ್ರಾಂಡ್ ರಾಯಭಾರ, ವೈಯಕ್ತಿಕ ಹೂಡಿಕೆಗಳು ಮತ್ತು ವ್ಯವಹಾರ ಉದ್ಯಮಗಳಿಂದ ಬಂದಿರುವಂಥದ್ದು

 2023ರ ವರದಿ ಪ್ರಕಾರ, ಸೈಫ್ ಅಲಿ ಖಾನ್ ವಾರ್ಷಿಕ 30 ಕೋಟಿ ರೂ ಗಳಿಸಿದ್ದು, ಇತ್ತೀಚಿಗೆ ಶುಲ್ಕವನ್ನು ಶೇ 70 ಹೆಚ್ಚಿಸಿದ್ದಾರೆ.

ಜಿಕ್ಯೂ ಇಂಡಿಯಾ ವರದಿಯ ಪ್ರಕಾರ, ಸೈಫ್ ಬಳಿ ಮರ್ಸಿಡಿಸ್ ಬೆಂಝ್ ಎಸ್ 350, ಆಡಿ ಕ್ಯೂ 7, ಜೀಪ್ ರಾಂಗ್ಲರ್ ಸೇರಿ ಐಷಾರಾಮಿ ಕಾರುಗಳ ಸಂಗ್ರಹವಿದೆ.

ಇಲುಮಿನಾಟಿ ಫಿಲಮ್ಸ್ ಮತ್ತು ಬ್ಲ್ಯಾಕ್ ನೈಟ್ ಫಿಲಮ್ಸ್, ಹಾಗೂ ಬಟ್ಟೆ ಬ್ರಾಂಡ್ ಹೌಸ್ ಆಫ್ ಪಟೌಡಿಗಾಗಿ ಮಿಂತ್ರಾದೊಂದಿಗೆ ಪಾಲುದಾರಿಕೆ ಹೊಂದಿದ್ದಾರೆ.

ಸೈಫ್ ಅಲಿ ಖಾನ್ ಪತ್ನಿ ಕರೀನಾ ಕಪೂರ್ ಖಾನ್ ಮತ್ತು ಮಕ್ಕಳೊಂದಿಗೆ ಮುಂಬೈನ ಬಾಂದ್ರಾದಲ್ಲಿರುವ ನಾಲ್ಕು ಅಂತಸ್ತಿನ ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದಾರೆ. 

ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಐಎಸ್ಪಿಎಲ್ ಕ್ರಿಕೆಟ್ ತಂಡ ಟೈಗರ್ಸ್ ಆಫ್ ಕೋಲ್ಕತ್ತಾದ ಸಹ ಮಾಲೀಕರು. 

ಹರಿಯಾಣದಲ್ಲಿರುವ ಪಟೌಡಿ ಅರಮನೆ 10 ಎಕರೆ ಪ್ರದೇಶದಲ್ಲಿ ವ್ಯಾಪಿಸಿದ್ದು, 150 ಕೊಠಡಿಗಳು, ಹೊರಾಂಗಣ ಕೊಳ ಮತ್ತು ಬಿಲಿಯರ್ಡ್ಸ್ ಕೊಠಡಿ ಇದೆ. 

ಕಾಲುಗಳು ಏಕೆ ಊದಿಕೊಳ್ಳುತ್ತವೆ? ಇಲ್ಲಿದೆ ಕಾರಣ