ಬಾಲನಟ ಮಾಸ್ಟರ್ ಕಿಶನ್ ಬಗ್ಗೆ ನಿಮಗೆ ಗೊತ್ತಿರಬಹುದು. ಕೇರ್ ಆಫ್ ಫುಟ್‌ಪಾತ್ ಸಿನಿಮಾದ ಮೂಲಕ ಸಿನಿಮಾ ಪ್ರೇಮಿಗಳ ಗಮನ ಸೆಳೆದಿದ್ದನು.
ತನ್ನ ತಂದೆಯ ಸಹಾಯ ಪಡೆದು ಈ ಸಿನಿಮಾದ ನಟನೆ ಮತ್ತು ನಿರ್ದೇಶನವನ್ನು ಕಿಶನ್ ಶ್ರೀಕಾಂತ್ ಮಾಡಿದ್ದರು.
ಕೇರ್ ಆಫ್ ಫುಟ್‌ಪಾತ್, ಕೇರ್ ಆಫ್ ಫುಟ್‌ಪಾತ್ 2 ಸಿನಿಮಾ ಮಾಡಿದ್ದನು. ಇದು ಹಿಂದಿಯಲ್ಲಿ ಕಿಲ್ ದೆಮ್ ಯಂಗ್ ಹೆಸರಲ್ಲಿ ಬಿಡುಗಡೆಯಾಗಿತ್ತು.
ಇದಲ್ಲದೆ ಹಲವು ಸಿನಿಮಾಗಳಲ್ಲಿ ಬಾಲನಟನಾಗಿ ನಟಿಸಿ ಗಮನಸೆಳೆದಿದ್ದನು.
ಗ್ರಾಮದೇವತೆ, ಹಲೋ ನಾರದ, ಲಾ ಆಂಡ್ ಆರ್ಡರ್, ವಂಶಕೊಬ್ಬ, ಚಂದು, ಲಾಲಿಹಾಡು
ಹಲೋ, ನೀನು ಇಲ್ದೆ ನಾನು ಇಲ್ಲಾ ಕಣೇ, ಎಕ್ಸ್‌ಕ್ಯೂಸ್‌ಮೀ, ಸ್ವಾತಿಮುತ್ತು, ಸರ್ದಾರ
ಮಹಾರಾಜ, ಜೋಗಿ, ತುಂಟ, ಶಂಬು, ಎನ್‌ಕೌಂಟರ್ ದಯಾನಾಯಕ್, ತುತ್ತೂರಿ, ಮಿಸ್ ಕ್ಯಾಲಿಫೋರ್ನಿಯಾ
ಐಶ್ವರ್ಯಾ, ಈ ಪ್ರೀತಿ ಏಕೆ ಭೂಮಿ ಮೇಲಿದೆ, ಚಿಲಿಪಿಲಿ ಹಕ್ಕಿಗಳು, ಮೊಗ್ಗಿನ ಮನಸ್ಸು,
ಜ್ಞಾನಜ್ಯೋತಿ ಶ್ರೀ ಸಿದ್ದಗಂಗಾ, ಟೀನೇಜ್ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು.
ಇದಾದ ಬಳಿಕ ಶಿಕ್ಷಣ ಮುಗಿಸಿ ಸ್ವಂತ ಕಂಪನಿಯೊಂದನ್ನು ಆರಂಭಿಸಿದ್ದರು. ಈಗ ಆ ಕಂಪನಿಯ ಕೆಲಸ ಕಾರ್ಯಗಳಲ್ಲಿ ಬಿಝಿಯಾಗಿದ್ದಾರೆ. ಜತೆಗೆ, ಸಿನಿಮಾ ಸ್ಕ್ರಿಪ್ಟ್‌ವೊಂದನ್ನೂ ಬರೆಯುತ್ತಿದ್ದಾರಂತೆ.