ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನು ಮೂಲಕ ಹೊರಗಿರುವ ನಟ ದರ್ಶನ್ ಜನವರಿ 10 ರಂದು ಕೋರ್ಟ್‌ಗೆ ಹಾಜರಾಗಿದ್ದಾರೆ.
17 ಆರೋಪಿಗಳು ಇಂದು (ಜನವರಿ 10) ಕೋರ್ಟ್‌ಗೆ ಹಾಜರಾದರು. ಜಾಮೀನು ಪಡೆದು ಹೊರಬಂದ ಬಳಿಕ ಕೋರ್ಟ್ ಸಮೀಪ ಆರೋಪಿಗಳಾದ ದರ್ಶನ್, ಪವಿತ್ರ ಗೌಡ ಮುಖಾಮುಖಿಯಾದರು.
ಈ ಸಂದರ್ಭದಲ್ಲಿ ನಟ ದರ್ಶನ್ ಮತ್ತು ಪವಿತ್ರ ಗೌಡ ಮುಖಾಮುಖಿಯಾಗಿದ್ದಾರೆ. ಈ ಸಂದರ್ಭದಲ್ಲಿ ಪವಿತ್ರಾ ಗೌಡರ ಬೆನ್ನು ತಟ್ಟಿ ದರ್ಶನ್ ಸಂತೈಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಜಾಮೀನು ಸಿಕ್ಕರೂ ಪವಿತ್ರಾಗೌಡ ಮತ್ತು ದರ್ಶನ್ ಮುಖಾಮುಖಿ ಭೇಟಿಯಾಗಿರಲಿಲ್ಲ. ಈ ಹಿಂದೆ ವಿಚಾರಣೆಯ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತ್ರ ಮುಖಾಮುಖಿಯಾಗಿದ್ದರು.
ನಂತರ ಇಬ್ಬರೂ ದೂರವೇ ಉಳಿದಿದ್ದರು. ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಮಂದಿಗೆ ಹೈಕೋರ್ಟ್ ಡಿ. 13 ರಂದು ಜಾಮೀನು ಮಂಜೂರು ಮಾಡಿತ್ತು.
ನಟ ದರ್ಶನ್ ಅವರು ಮತ್ತೊಬ್ಬ ನಟ ಧನ್ವೀರ್ ಜೊತೆ ನ್ಯಾಯಾಲಯಕ್ಕೆ ಆಗಮಿಸಿದರು. ಅವರೊಂದಿಗೆ ಅವರ ವಕೀಲರೂ ಇದ್ದರು.