ಇವಳು ಕನ್ನಡ ನಟಿ ಅದಿತಿ ಪ್ರಭುದೇವ ಮಗಳು ನೇಸರ- ಮುದ್ದಾಗಿದ್ದಾಳೆ ಅಲ್ವಾ?
ಹೊಸ ವರ್ಷದ ಸಮಯದಲ್ಲಿ ಕನ್ನಡ ನಟಿ ಅದಿತಿ ಪ್ರಭುದೇವ ತನ್ನ ಮಗಳ ಜತೆ ಫೋಟೋ ಹಂಚಿಕೊಂಡಿದ್ದಾರೆ.
ಅದಿತಿ ಮಗಳು ನೇಸರ ಏಪ್ರಿಲ್ 4ರಂದು ಜನಿಸಿದ್ದಳು. ಇದೇ ವರ್ಷ ಏಪ್ರಿಲ್‌ಗೆ ಒಂದು ವರ್ಷ ತುಂಬಲಿರುವ ನೇಸರಳ ಮುದ್ದಾದ ಫೋಟೋ ಹಂಚಿಕೊಂಡಿದ್ದಾರೆ.
ಕೆಲವು ತಿಂಗಳ ಹಿಂದೆಯೂ ತನ್ನ ಮಗಳ ಫೋಟೋ ಹಂಚಿಕೊಂಡಿದ್ದರು. ಆಗ ಮಗು ಇನ್ನೂ ಪುಟಾಣಿ ಆಗಿತ್ತು.
ಕಳೆದ ವರ್ಷ ಜೂನ್ 8ರಿಂದ ಆರಂಭವಾದ ರಾಜಾರಾಣಿ ರಿಯಾಲಿಟಿ ಶೋನಲ್ಲಿ ಅದಿತಿ ಪ್ರಭುದೇವ ಜಡ್ಜ್ ಆಗಿದ್ದರು.
ನಟಿ ಅದಿತಿ ಪ್ರಭುದೇವ ಮತ್ತು ಕೊಡಗಿನ ಯಶಸ್ ಪಟ್ಲ 2022ರಲ್ಲಿ ಮದುವೆಯಾಗಿದ್ದರು.
ಕಳೆದ ವರ್ಷ ಬಿಡುಗಡೆಯಾದ ಮ್ಯಾಟ್ನಿ ಸಿನಿಮಾದಲ್ಲಿ ಅದಿತಿ ನಟಿಸಿದ್ದಾರೆ. 2017ರಲ್ಲಿ ಧೈರಂ ಸಿನಿಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ನೀಡಿದ್ದರು.
ಬಳಿಕ ಬಜಾರ್, ಆಪರೇಷನ್ ನಕ್ಷತ್ರ, ಸಿಂಗ, ರಂಗನಾಯಕಿ, ಬ್ರಹ್ಮಚಾರಿ, ಆನ, ಒಂಬತ್ತನೇ ದಿಕ್ಕು, ಓಲ್ಡ್ ಮಾಂಕ್ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು.
ಗಜಾನನ ಆಂಡ್ ಗ್ಯಾಂಗ್, ತೋತಾಪುರಿ, ಚಾಂಪಿಯನ್ ,ಟ್ರಿಪಲ್ ರೈಡಿಂಗ್, ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ, ಚೋಸ್, ತೋತಾಪುರಿ ಚಾಪ್ಟರ್ 2 ಮುಂತಾದ ಸಿನಿಮಾಗಳಲ್ಲಿ ಅದಿತಿ ಪ್ರಭುದೇವ ನಟಿಸಿದ್ದಾರೆ.