She’s beautiful…isn’t it? ಇವಳು ಚಂದ ಇದ್ದಾಳೆ ಅಲ್ವಾ ಎಂದು ಫೋಟೋಗಳಿಗೆ ಕ್ಯಾಪ್ಷನ್ ನೀಡಿದ್ದಾರೆ.
ಚೈತ್ರಾ ಜೆ ಆಚಾರ್ ಹಲವು ಸಿನಿಮಾಗಳ ನಟನೆಯಲ್ಲಿ ಬಿಝಿ ಇದ್ದಾರೆ. ಇದರ ನಡುವೆ ಹೊಸ ಫೋಟೋಗಳ ಮೂಲಕ ಅಭಿಮಾನಿಗಳನ್ನು ಬೆರಗುಗೊಳಿಸುತ್ತಾರೆ.
ನಿರ್ದೇಶಕ ಶ್ರೀ ಗಣೇಶ್ ಅವರು ನಟ ಸಿದ್ಧಾರ್ಥ್ 40ನೇ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ತಮಿಳು ಸಿನಿಮಾದಲ್ಲಿ ಸಪ್ತ ಸಾಗರದಾಚೆ ಚೆಲುವೆ ಚೈತ್ರಾ ಜೆ ಆಚಾರ್ ನಟಿಸುತ್ತಿದ್ದಾರೆ.
ಚೈತ್ರಾ ಜೆ ಆಚಾರ್, ಸಿದ್ದು ಮೂಲಿಮನಿ ಮತ್ತು ಇತರೆ ಯುವ ಕಲಾವಿದರು ನಟಿಸಿರುವ ಹ್ಯಾಪಿ ಬರ್ತ್‌ಡೇ ಟು ಮಿ ಸಿನಿಮಾ ಇತ್ತೀಚೆಗೆ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು.
ಚೈತ್ರಾ ಜೆ ಆಚಾರ್ ಅವರು ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ, ಟೋಬಿ, ಬ್ಲಿಂಕ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಶಿವರಾಜ್ ಕುಮಾರ್, ಡಾಲಿ ಧನಂಜಯ್ ನಟನೆಯ ಉತ್ತರಕಾಂಡ ಸಿನಿಮಾದಲ್ಲೂ ಚೈತ್ರಾ ಜೆ ಆಚಾರ್ ನಟಿಸುತ್ತಿದ್ದಾರೆ.
ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿಯಲ್ಲಿ ಇವರು ರಕ್ಷಿತ್ ಶೆಟ್ಟಿ ಜತೆ ನಟಿಸಿದ್ದರು. ನಾಯಕ ಮನುವಿನ ಪ್ರೇಯಸಿಯಾಗಿ ನಟಿಸಿದ್ದರು.
ಚೈತ್ರಾ ಜೆ ಆಚಾರ್ ಅವರು ಮಹಿರಾ ಎಂಬ ಸಿನಿಮಾದ ಮೂಲಕ 2019ರಲ್ಲಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು.