ವಿಶೇಷ ವಿಷಯದ ಮೇಲೆ ಸಂಶೋಧನೆ ನಡೆಸಿ ಡಾಕ್ಟರೇಟ್‌ ಪದವಿ ಪಡೆದ ನಟಿ ಮೇಘನಾ ಗಾಂವ್ಕರ್‌ 

By Manjunath B Kotagunasi
Mar 24, 2025

Hindustan Times
Kannada

ಸ್ಯಾಂಡಲ್‌ವುಡ್‌ನಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ ನಟಿ ಮೇಘನಾ ಗಾಂವ್ಕರ್‌

ನಟನೆಯ ಜತೆಗೆ ಓದು, ಅಧ್ಯಯನದ ಕಡೆಗೂ ಮೇಘನಾ ಅವರಿಗೆ ವಿಶೇಷ ಆಸಕ್ತಿ

ಇದೀಗ ಕೊನೆಗೂ ಅಪ್ಪನ ಕನಸೊಂದನ್ನು ನನಸು ಮಾಡಿದ ಖುಷಿಯಲ್ಲಿದ್ದಾರೆ ಮೇಘನಾ ಗಾಂವ್ಕರ್‌

ಅಂದರೆ, ಕಳೆದ ಆರು ವರ್ಷಗಳ ಅವರ ನಿರಂತರ ಓದು, ಅಧ್ಯಯನಕ್ಕೆ ಇದೀಗ ಪ್ರತಿಫಲ ಸಿಕ್ಕಿದೆ

ʻಸಿನಿಮಾ ಮತ್ತು ಸಾಹಿತ್ಯʼ ವಿಷಯದ ಮೇಲೆ ಮೇಘನಾ ಗಾಂವ್ಕರ್‌ ಪಿಎಚ್‌ಡಿ ಪಡೆದಿದ್ದಾರೆ

ಈ ಖುಷಿಯ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿಯೂ ಹಂಚಿ ಸಂಭ್ರಮಿಸಿದ್ದಾರೆ

ʻಈ ನನ್ನ ಪಿಎಚ್‌ಡಿ ಡಾಕ್ಟರೇಟ್‌ ಪದವಿಯನ್ನು ನನ್ನ ತಂದೆಗೆ ಅರ್ಪಿಸುತ್ತೇನೆʼ ಎಂದಿದ್ದಾರೆ ಮೇಘನಾ

ಮಗಳು ಪಿಎಚ್‌ಡಿ ಮಾಡಬೇಕು ಎಂಬ ಆಸೆ ಮೇಘನಾ ಅವರ ತಂದೆಗೆ ಇತ್ತಂತೆ, ಅದನ್ನೀಗ ಈಡೇರಿಸಿದ್ದಾರೆ

ಕೊನೆಯದಾಗಿ ʻಈ ಪಿಚ್‌ಎಚ್‌ಡಿ ಪಯಣ ಅಷ್ಟೊಂದು ಸುಲಭದ್ದಾಗಿರಲಿಲ್ಲʼ ಎಂದೂ ಹೇಳಿದ್ದಾರೆ

Horoscope: ಸಮಸ್ಯೆಗಳನ್ನು ಸರಿಪಡಿಸುತ್ತೀರಿ; ಏಪ್ರಿಲ್ 23ರ ಬುಧವಾರದ ದಿನ ಭವಿಷ್ಯ