Appu biography: ಅಪ್ಪು ಜೀವನಚರಿತ್ರೆ, ಇದು ಪುನೀತ್ ರಾಜ್‌ಕುಮಾರ್ ಬದುಕಿನ ಕಥೆ
By Praveen Chandra B
Mar 19, 2025
Hindustan Times
Kannada
"ಪ್ರಸ್ತುತಪಡಿಸುತ್ತಿದ್ದೇವೆ 'ಅಪ್ಪು' - ಅಪ್ಪುವಿನ ಭಾವನಾತ್ಮಕ ಜೀವನಚರಿತ್ರೆ" ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಇತ್ತೀಚೆಗೆ ಘೋಷಿಸಿದ್ದರು.
ಅಪ್ಪು ಜೀವನಚರಿತ್ರೆ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ. ಈ ಪುಸ್ತಕದಲ್ಲಿ ಪುನೀತ್ ರಾಜ್‌ಕುಮಾರ್ ಬದುಕಿನ ಅಪರೂಪದ ವಿಷಯಗಳು ಇರಲಿವೆ.
ಈ ಹಿಂದೆ ಪ್ರಕೃತಿ ಬನವಾಸಿ ಮತ್ತು ಪುನೀತ್ ರಾಜ್‌ಕುಮಾರ್ ಜತೆಯಾಗಿ ಡಾ ರಾಜ್‌ಕುಮಾರ್ ಪುಸ್ತಕ ಹೊರತಂದಿದ್ದರು.
ಇದೀಗ ಪ್ರಕೃತಿ ಬನವಾಸಿ ಮತ್ತು ಅಶ್ವಿನಿ ಪುನೀತ್ ರಾಜ್‌ಕುಮಾರ್ ಜತೆಯಾಗಿ ಅಪ್ಪು ಬಗ್ಗೆ ಪುಸ್ತಕ ಬರೆಯುತ್ತಿದ್ದಾರೆ.
ಈ ಜೀವನಚರಿತ್ರೆಯಲ್ಲಿ ಅಪ್ಪು ಬಗ್ಗೆ ಸಾಕಷ್ಟು ಜನರು ಮಾತನಾಡಿದ್ದಾರೆ. ಹಲವು ಲೇಖನಗಳು, ನೆನಪುಗಳು ಇರಲಿವೆ.
ಸಿನಿಮಾಕ್ಕೆ ಸಂಬಂಧಿಸಿದ ತಂತ್ರಜ್ಞರು, ಅಪ್ಪು ಆತ್ಮೀಯರು ಈ ಜೀವನಚರಿತ್ರೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ.
ಅಶ್ವಿನಿ ಪುನೀತ್ ರಾಜ್‌ಕುಮಾರ್ ಮಕ್ಕಳು ಕೂಡ ಈ ಪುಸ್ತಕಕ್ಕೆ ಕೆಲಸ ಮಾಡಿದ್ದಾರೆ. ಅಪ್ಪನ ಚಿತ್ರಗಳು, ಪುಸ್ತಕದ ವಿನ್ಯಾಸಕ್ಕೆ ಕೆಲಸ ಮಾಡಿದ್ದಾರೆ.
ಅಂದಹಾಗೆ ಈ ಚಿತ್ರದ ಮುಖಪುಟದಲ್ಲಿ ಇರುವುದು ಅಂಜನೀಪುತ್ರ ಸಿನಿಮಾಕ್ಕೆ ಸಂಬಂಧಿಸಿದ್ದು. ಆ ಸಿನಿಮಾದ ಅಂತಿಮ ಹಂತದಲ್ಲಿ ತೆಗೆದ ಅಪರೂಪದ ಫೋಟೋ ಇದಾಗಿದೆ.
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ