ಬಘೀರ ಸಿನಿಮಾ ಪಾತ್ರಕ್ಕಾಗಿ ದೇಹ ಹುರಿಗಟ್ಟಿಸಿದ ಶ್ರೀಮುರಳಿ
bharathgowda__instagram
By Praveen Chandra B
Oct 30, 2024
Hindustan Times
Kannada
ಗಲಾಟಾ ತೆಲುಗು ತಾಣಕ್ಕೆ ನೀಡಿದ ಸಂದರ್ಶನದಲ್ಲಿ ಶ್ರೀಮುರಳಿ ತನ್ನ ದೇಹದ ರೂಪಾಂತರದ ಕುರಿತು ತಿಳಿಸಿದ್ದಾರೆ.
bharathgowda__instagram
ಕಳೆದ ಮೂರು ವರ್ಷಗಳಲ್ಲಿ ನನಗೆ ಯಾವುದೇ ಬೇರೆ ಆಯ್ಕೆ ಇರಲಿಲ್ಲ. ದಿನದಲ್ಲಿ ನಾಲ್ಕು ಗಂಟೆ ವರ್ಕೌಟ್ ಮಾಡುತ್ತಿದ್ದೆ ಎಂದಿದ್ದಾರೆ.
ಬಘೀರ ಸಿನಿಮಾಕ್ಕಾಗಿ ತನ್ನ ದೇಹವನ್ನು ಸಂಪೂರ್ಣವಾಗಿ ಹುರಿಗಟ್ಟಿಸಿದ್ದಾರೆ. ಈ ಸಿನಿಮಾದ ಪೊಲೀಸ್ ಪಾತ್ರಕ್ಕೆ ಅಂತಹ ಡೆಡಿಕೇಷನ್ ಅಗತ್ಯವಿತ್ತು ಎಂದು ಅವರು ಹೇಳಿದ್ದಾರೆ.
bharathgowda__instagram
ನನಗೆ ತಿನ್ನುವುದು ತುಂಬಾ ಇಷ್ಟ. ಅನ್ನ ಸಾಂಬಾರ್, ಮೊಸರು, ಬೆನ್ನೆ, ಚಿಕನ್ ಎಲ್ಲವನ್ನೂ ಮೊದಲು ತಿನ್ನುತ್ತಿದ್ದೆ.
ಆದರೆ, ಕಳೆದ ಮೂರು ವರ್ಷಗಳಲ್ಲಿ ನನ್ನ ಎಲ್ಲಾ ಇಷ್ಟದ ಆಹಾರ ಬಿಟ್ಟೆ. ಇಂತಹ ಸಿನಿಮಾಕ್ಕೆ ಇದು ಅಗತ್ಯವಿತ್ತು ಎಂದು ಅವರು ಹೇಳಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ನನ್ನ ಪ್ರೀತಿಯ ಸಿಹಿತಿಂಡಿಗಳು, ಸಕ್ಕರೆ, ಬೆಣ್ಣೆ ತುಪ್ಪ ಎಲ್ಲವನ್ನೂ ಬಿಟ್ಟೆ.
ನನಗೆ ಮೊಸರು ಇಷ್ಟ. ಊಟ, ಮೊಸರು, ಕೆಲವು ಕಬಾಬ್ ಫೀಸ್ ಇದ್ದರೆ ಸೂಪರ್.
ಈ ಮೂರು ವರ್ಷ ಕೇವಲ ದೈಹಿಕ ರೂಪಾಂತರವಲ್ಲ. ನನ್ನ ಮನಸ್ಸು ಕೂಡ ಈ ಪಾತ್ರಕ್ಕಾಗಿ ಗಟ್ಟಿಯಾಗಿತ್ತು ಎಂದು ಅವರು ಹೇಳಿದ್ದಾರೆ.
ಶ್ರೀಮುರಳಿ, ರುಕ್ಮಿಣಿ ವಸಂತ್ ನಟನೆಯ ಬಘೀರ ಸಿನಿಮಾ ಅಕ್ಟೋಬರ್ 31ರಂದು ಬಿಡುಗಡೆಯಾಗಲಿದೆ.
ಮಕ್ಕಳ ಎಲುಬು ಗಟ್ಟಿಯಾಗಿಸಲು ನೆರವಾಗುವ 5 ಆಹಾರಗಳು
pixa bay
ಮುಂದಿನ ಸ್ಟೋರಿ ಕ್ಲಿಕ್ ಮಾಡಿ