ಚಂದನ್ ಶೆಟ್ಟಿಗೆ ಡಿವೋರ್ಸ್ ನೀಡಿದ ಬಳಿಕ ಹೀಗಂದ್ರು ನಿವೇದಿತಾ ಗೌಡ
By Praveen Chandra B
Jun 07, 2024
Hindustan Times
Kannada
ಬಿಗ್‌ಬಾಸ್ ಸೀಸನ್ 5ರ ಕ್ಯೂಟ್ ಜೋಡಿ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ.
ಇಂದು ಡಿವೋರ್ಸ್ ಪಡೆದು ಅಭಿಮಾನಿಗಳನ್ನು ಅಚ್ಚರಿಗೆ ದೂಡಿದ್ದಾರೆ.
ಒಂದೇ ದಿನದಲ್ಲಿ ಕೋರ್ಟ್ ಇವರಿಗೆ ಡಿವೋರ್ಸ್ ಮಂಜೂರು ಮಾಡಿದೆ.
ಇದೀಗ ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಡೇಟ್ ನೀಡಿದ್ದಾರೆ.
ಈ ದಿನ ಚಂದನ್ ಶೆಟ್ಟಿ ಮತ್ತು ನಾನು ನಮ್ಮ ದಾಂಪತ್ಯ ಜೀವನವನ್ನು ಕಾನೂನುಬದ್ಧವಾಗಿ ಪರಸ್ಪರ ಒಪ್ಪಿಗೆಯಿಂದ ಕೊನೆಗೊಳಿಸಿದ್ದೇವೆ.
ನಮ್ಮ ನಿರ್ಧಾರವನ್ನು ಮತ್ತು ನಮ್ಮ ಜೀವನದ ಖಾಸಗಿತನವನ್ನು ಗೌರವಿಸಲು ಕೋರುತ್ತೇವೆ.
ನಾವು ನಮ್ಮ ಪ್ರತ್ಯೇಕ ಮಾರ್ಗ ಅನುಸರಿಸಿದರೂ ಪರಸ್ಪರ ಒಬ್ಬರನೊಬ್ಬರು ಗೌರವಿಸುತ್ತೇವೆ.
ಸೂಕ್ಷ್ಮ ಪರಿಗಣನೆಗಾಗಿ ಎಲ್ಲರಿಗೂ ಧನ್ಯವಾದಗಳು ಎಂದು ನಿವೇದಿತಾ ಗೌಡ ಪೋಸ್ಟ್ ಮಾಡಿದ್ದಾರೆ.
ಪ್ರಕೃತಿಯ ಪವಾಡ: ಅತ್ಯಂತ ಸುಂದರವಾದ 5 ಪಕ್ಷಿಗಳು
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ