ಲಂಗ ದಾವಣಿ ಬಿಟ್ಟು ಸೀರೆಯುಟ್ಟು ಮಿಂಚಿದ ಲಕ್ಷ್ಮೀ ನಿವಾಸದ ಚೆಲ್ವಿ; ಇಲ್ಲಿವೆ ಚೆಂದದ ಫೋಟೊಗಳು 

Image Credit: Instagram

By Reshma
Apr 11, 2025

Hindustan Times
Kannada

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಚೆಲ್ವಿ ಹಾಗೂ ವೆಂಕಿ ಜೋಡಿ ಸಖತ್ ಫೇಮಸ್‌ 

ಧಾರಾವಾಹಿಯಲ್ಲಿ ಸದಾ ಲಂಗ ದಾವಣಿಯಲ್ಲಿ ಕಾಣಿಸುವ ಚೆಲ್ವಿ ಈಗ ಸೀರೆಯುಟ್ಟು ಮಿಂಚಿದ್ದಾರೆ  

ಇನ್‌ಸ್ಟಾಗ್ರಾಂನಲ್ಲಿ ಸೀರೆಯುಟ್ಟು ಫೋಟೊ ಪೋಸ್‌ ನೀಡುವ ಮೂಲಕ ಗಮನ ಸೆಳೆದಿದ್ದಾರೆ 

ಮಾತು ಬಾರದ ವೆಂಕಿಗೆ ಬದುಕು ಕೊಟ್ಟ ದಿಟ್ಟ ಹುಡುಗಿ ಚೆಲ್ವಿ ನಟನೆಗೆ ಕಿರುತೆರೆ ಪ್ರೇಕ್ಷಕರು ಮನ ಸೋತಿದ್ದಾರೆ 

ಅತ್ತೆ–ಮಾವನ ಮುದ್ದಿನ ಸೊಸೆಯಾಗಿ, ಗಂಡನಿಗೆ ತಕ್ಕ ಹೆಂಡತಿಯಾಗಿರುವ ಚೆಲ್ವಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಅಶ್ವಿನಿ ಆರ್ ಮೂರ್ತಿ ‌‌

ಇವರು ಲಕ್ಷಣ, ಮರಳಿ ಮನಸಾಗಿದೆ, ಬಯಸದೇ ಬಳಿ ಬಂದೆ ಮುಂತಾದ ಧಾರಾವಾಹಿಗಳಲ್ಲೂ ನಟಿಸಿದ್ದರು

ಮರೂನ್ ಬಣ್ಣದ ಸೀರೆಯುಟ್ಟು ಫೋಟೊಗೆ ಪೋಸ್ ಕೊಟ್ಟಿರುವ ಚೆಲ್ವಿ  ಅಂದವನ್ನು ಹಾಡಿ ಹೊಗಳಿದ್ದಾರೆ ಅಭಿಮಾನಿಗಳು 

ನಟಿ ಮಾತ್ರವಲ್ಲದೇ ಕಾಸ್ಮಲಾಜಿಸ್ಟ್ ಕೂಡ ಆಗಿರುವ ಇವರು ತಮ್ಮದೇ ಆದ ಸಲೂನ್ ಅನ್ನು ಕೂಡ ಹೊಂದಿದ್ದಾರೆ 

ಸದ್ಯ ಧಾರಾವಾಹಿಯಲ್ಲಿ ಕಾಣೆಯಾಗಿರುವ ವೆಂಕಿಯನ್ನು ಹುಡುಕುವ ಪ್ರಯತ್ನದಲ್ಲಿದ್ದಾರೆ ಚೆಲ್ವಿ  

ರಂಬುಟಾನ್ ಹಣ್ಣಿನ ಆರೋಗ್ಯ ಪ್ರಯೋಜನಗಳಿವು