ವಿರಾಟ್ ಕೊಹ್ಲಿ ಜೊತೆ ಡೇಟಿಂಗ್ ನಡೆಸಿದ್ದ ಕನ್ನಡದ ನಟಿ ಯಾರು?

By Prasanna Kumar P N
Apr 01, 2024

Hindustan Times
Kannada

ಅನುಷ್ಕಾ ಶರ್ಮಾ ಅವರನ್ನು ಕೈ ಹಿಡಿಯುವ ಮುನ್ನ ವಿರಾಟ್ ಕೊಹ್ಲಿ ಐವರು ಗರ್ಲ್‌ಫ್ರೆಂಡ್ಸ್‌ ಜೊತೆ ಡೇಟಿಂಗ್ ಮಾಡಿದ್ದರು.

ಈ ಪೈಕಿ ಕನ್ನಡದ ನಟಿಯೂ ಇದ್ದಾರೆ. ನಟಿ ಸಂಜನಾ ಗಲ್ರಾನಿ ಜೊತೆ ಕೂಡ ವಿರಾಟ್ ‌ಹೆಸರು ತಳುಕು ಹಾಕಿಕೊಂಡಿತ್ತು.

2011ರಲ್ಲಿ ಕೊಹ್ಲಿ ಅಂದು ಐಪಿಎಲ್‌ನಲ್ಲಿ ವಿಜಯ್ ಮಲ್ಯ ಮಾಲೀಕತ್ವದ ಆರ್​ಸಿಬಿ ತಂಡದಲ್ಲೇ ಇದ್ದರು.

ಅಂದು ಟೀಮ್ ಇಂಡಿಯಾದ "ಮೋಸ್ಟ್ ಎಲಿಜಿಬಲ್ ಬ್ಯಾಚುಲರ್" ಆಗಿದ್ದ ಕೊಹ್ಲಿ, ಮಲ್ಯ ಪಾರ್ಟಿಗಳಿಗೆ ಬರುತ್ತಿದ್ದ ಮಾಡೆಲ್​​​​​, ನಟಿಯರನ್ನು ಸೆಳೆಯುತ್ತಿದ್ದರು.

ಇವರಲ್ಲಿ ದಕ್ಷಿಣ ಭಾರತದ ಚಿತ್ರಗಳಲ್ಲಿ ತನ್ನದೇ ಆದ ಐಡೆಂಟಿಟಿ ಮೂಡಿಸಿದ್ದ ಸಂಜನಾ ಗಲ್ರಾನಿ ಕೂಡ ಒಬ್ಬರು.

ಗಲ್ರಾನಿ ಆರ್​ಸಿಬಿ ಪಂದ್ಯವನ್ನು ಬೆಂಬಲಿಸಲು ಮೈದಾನಕ್ಕೆ ಬರುತ್ತಿದ್ದರು. ಕೊಹ್ಲಿ-ಗಲ್ರಾನಿ ಸ್ನೇಹ, ಕೊನೆಗೆ ಪ್ರೀತಿಗೆ ತಿರುಗಿತ್ತು.

ಇವರಿಬ್ಬರು ಸುತ್ತಾಡಿದ್ದ ಫೋಟೋಗಳು ಜಾಲತಾಣಗಳಲ್ಲಿ ವೈರಲ್ ಆದವು. ಆದರೆ ಇಬ್ಬರೂ ಈ ಸಂಬಂಧವನ್ನು ನಿರಾಕರಿಸಿದ್ದರು.

ಸಂಜನಾ ಕೂಡ ತನ್ನನ್ನು ವಿರಾಟ್‌ನ ಸ್ನೇಹಿತ ಎಂದು ಕರೆದು ಈ ಊಹಾಪೋಹಗಳನ್ನು ತಡೆಯಲು ಪ್ರಯತ್ನಿಸಿದರು.

ನಂತರ, ಐಪಿಎಲ್‌ನ ಆ ಸೀಸನ್ ಕೊನೆಗೊಂಡಾಗ, ಅವರ ಸಂಬಂಧದ ಬಗ್ಗೆ ಚರ್ಚೆಗಳು ಸಹ ಕೊನೆಗೊಂಡವು.

ಪವರ್‌ಪ್ಲೇನಲ್ಲಿ 125 ರನ್ ಗಳಿಸಿ ವಿಶ್ವದಾಖಲೆ ನಿರ್ಮಿಸಿದ ಎಸ್‌ಆರ್‌ಎಚ್