ಸಿವಿ ರಾಮನ್‌ರಿಂದ ಸಿಎನ್ಆರ್ ರಾವ್‌ವರೆಗೆ, ಭಾರತದ 10 ಖ್ಯಾತ ವಿಜ್ಞಾನಿಗಳ ಬಗ್ಗೆ ತಿಳಿಯೋಣ

By Raghavendra M Y
Feb 23, 2024

Hindustan Times
Kannada

ಸಿವಿ ರಾಮನ್ ಭೌತಶಾಸ್ತ್ರಜ್ಞರಾಗಿದ್ದು, 1930ರಲ್ಲಿ ಭೌತಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ ಸಂದಿದೆ. ಭಾರತ ರತ್ನ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಬೆಳಕಿನ ಸ್ಕ್ಯಾಟರಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ

ಸತ್ಯೇಂದ್ರ ನಾಥ್ ಬೋಸ್ ಅವರು ಭಾರತೀಯ ಗಣಿತಶಾಸ್ತ್ರಜ್ಞ ಮತ್ತು ಸೈದ್ಧಾಂತಿಕ ಭೌತಶಾಸ್ತ್ರದಲ್ಲಿ ಪರಿಣಿತಿ ಹೊಂದಿದ್ದರು. 1920ರ ದಶಕದಲ್ಲಿ ಕ್ವಾಂಟಮ್ ಮೆಕ್ಯಾನಿಕ್ಸ್‌ನಲ್ಲಿನ ಕೆಲಸಕ್ಕೆ ಜನಪ್ರಿಯ

ವಿಕ್ರಮ್ ಸಾರಾಭಾಯಿ - ಭಾರತದ ಬಾಹ್ಯಕಾಶ ಸಾಧನೆಗೆ ಮುನ್ನಡಿ ಬರೆದ ವಿಕ್ರಂ ಸಾಪಾಭಾಯಿ ಭಾರತದ ಖ್ಯಾತಿ ವಿಜ್ಞಾನಿಗಳಲ್ಲಿ ಪ್ರಮುಖರು. ಜನಪ್ರಿಯ ಭೌತಶಾಸ್ತ್ರಜ್ಞರು ಆಗಿದ್ದಾರೆ

ಹೋಮಿ ಜೆ ಭಾಭಾ - ಭಾರತದ ಅಣು ಪಿತಾಮಹ ಡಾ ಹೋಮಿ ಜಹಾಂಗೀರ್ ಭಾಭಾ ದೇಶ ಕಂಡ ಮಹಾನ್ ವಿಜ್ಞಾನಿಯಾಗಿದ್ದಾರೆ

ಡಾ ಎಬಿಜೆ ಅಬ್ದುಲ್ ಕಲಾಂ - ಬಾಹ್ಯಕಾಶದ ಖ್ಯಾತ ಇಂಜಿನಿಯರ್ ಆಗಿದ್ದ ಕಲಾಂ ಅವರು ಭಾರತದ ಇಸ್ರೋ, ಸೇನಾ ಮಿಸೈಲ್‌ಗೆ ಅಪಾರವಾದ ಕೊಡುಗೆಯನ್ನ ನೀಡಿದ್ದಾರೆ. ರಾಷ್ಟ್ರಪತಿಗಳಾಗಿಯೂ ಸೇವೆ ಸಲ್ಲಿಸಿದ್ದಾರೆ

ಭಾರತದ ಮತ್ತೊಬ್ಬ ಪ್ರಸಿದ್ಧ ವಿಜ್ಞಾನಿ ಜಗದೀಶ್ ಚಂದ್ರ ಬೋಸ್. ವಿಜ್ಞಾನ ಲೋಕದಲ್ಲಿ ಇವರ ಸಾಧನೆ ಸದಾ ಸ್ಮರಣೀಯವಾಗಿದೆ

ಬೆಳಕಿನ ಒತ್ತಡವನ್ನು ಅಳೆಯುವ ಸೂಕ್ಷ್ಮ ಉಪಕರಣವನ್ನು ಸೃಷ್ಟಿಸಿದವರು ಮೇಘನಾದ ಸಾಹ ಅವರು. 27ನೇ ವಯಸ್ಸಿಗೆ ಪ್ರಯೋಗದ ಮೂಲಕ ಗಮನ ಸೆಳೆದಿದ್ದರು

ಶ್ರೀನಿವಾಸನ್ ರಾಮಾನುಜನ್ - ಗಣಿತಶಾಸ್ತ್ರದಲ್ಲಿ ಯಾವುದೇ ತರಬೇತಿ ಪಡೆಯದಿದ್ದರೂ ವಿಶ್ಲೇಷಣೆ, ಸಂಖ್ಯೆ ಸಿದ್ದಾಂತದ ಮೂಲಕ ಭಿನ್ನರಾಶಿಗಳಿಗೆ ಗಣನೀಯ ಕೊಡುಗೆ ನೀಡಿದರು  

ವೆಂಕಟರಾಮನ್ ರಾಧಾಕೃಷ್ಣನ್ - ಭಾರತೀಯ ಬಾಹ್ಯಕಾಶ ವಿಜ್ಞಾನಿಯಾಗಿದ್ದ ಇವರು ಬೆಂಗಳೂರಿನ ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಪ್ರೊಫೆಸರ್ ಎಮೆರಿಟಸ್ ಆಗಿದ್ದವರು

ಸಿಎನ್ಆರ್ ರಾವ್ - ಚಿಂತಾಮಣಿ ನಾಗೇಶ ರಾಚಂದ್ರ ರಾವ್ ಅವರು ಭಾರತೀಯ ರಸಾಯನಶಾಸ್ತ್ರಜ್ಞರಾಗಿದ್ದಾರೆ. ಘನ-ಸ್ಥಿತಿ ಹಾಗೂ ರಚನಾತ್ಮಕ ರಸಾಯಶಾಸ್ತ್ರದಲ್ಲಿ ಕೆಲಸ ಮಾಡಿದ್ದಾರೆ. ಭಾರತ ರತ್ನ ಗೌರವಕ್ಕೂ ಭಾಜನರಾಗಿದ್ದಾರೆ

ಆನೆಗಳನ್ನು ಮುಂದಿನ ಪೀಳಿಗೆಗೆ ಉಳಿಸಲು ಪಾರಂಪರಿಕ ಪ್ರಾಣಿ ಎನ್ನುವ ಗೌರವವನ್ನು 2010ರಲ್ಲಿಯೇ ಭಾರತ ಸರ್ಕಾರ ನೀಡಿದೆ