ದಾಖಲೆಗಳ ಸರದಾರ ಶುಭ್ಮನ್ ಗಿಲ್; ಹೊಸ ಇತಿಹಾಸ ಸೃಷ್ಟಿಸಿದ ನಾಯಕ
By Prasanna Kumar P N Apr 05, 2024
Hindustan Times Kannada
ಪಂಜಾಬ್ ಕಿಂಗ್ಸ್ ವಿರುದ್ಧ ಅಜೇಯ 89 ರನ್ ಬಾರಿಸಿದ ಶುಭ್ಮನ್ ಗಿಲ್ ತನ್ನ ಫ್ರಾಂಚೈಸಿ ಗುಜರಾತ್ ಟೈಟಾನ್ಸ್ ಪರ ಇತಿಹಾಸ ನಿರ್ಮಿಸಿದ್ದಾರೆ.
ಜಿಟಿ ಫ್ರಾಂಚೈಸಿ ಪರವೇ 1500+ ರನ್ ಗಳಿಸಿದ ಮೊದಲ ಆಟಗಾರ ಎಂಬ ದಾಖಲೆ ಸೃಷ್ಟಿಸಿದ್ದಾರೆ.
24 ವರ್ಷದ ಗಿಲ್ ಫ್ರಾಂಚೈಸಿ ಪರ 37 ಇನ್ನಿಂಗ್ಸ್‌ಗಳಲ್ಲಿ 48.03 ಸರಾಸರಿ ಮತ್ತು 148.93ರ ಸ್ಟ್ರೈಕ್ ರೇಟ್‌ನೊಂದಿಗೆ 1537 ರನ್ ಗಳಿಸಿದ್ದಾರೆ.
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ನಾಯಕ ಶುಭ್ಮನ್ ಗಿಲ್ ಬೃಹತ್ ಹೆಗ್ಗುರುತನ್ನು ಸಾಧಿಸಿದ್ದಾರೆ.
2022ರಲ್ಲಿ ಗುಜರಾತ್ ಸೇರಿದ್ದ ಗಿಲ್, 16 ಪಂದ್ಯಗಳಲ್ಲಿ 483 ರನ್ ಗಳಿಸಿದ್ದರು. 2023ರ ಐಪಿಎಲ್‌ನಲ್ಲಿ 890 ರನ್ ಗಳಿಸಿದ್ದರು. ಪ್ರಸ್ತುತ ಐಪಿಎಲ್‌ನಲ್ಲಿ 164 ರನ್ (ಏಪ್ರಿಲ್ 4ರ ಅಂತ್ಯಕ್ಕೆ) ಗಳಿಸಿದ್ದಾರೆ.
ಗುಜರಾತ್ಗೂ ಮುನ್ನ ಅವರು ಕೆಕೆಆರ್ ತಂಡದ ಪರ ಆಡಿದ್ದರು. ಒಟ್ಟಾರೆಯಾಗಿ, ಗಿಲ್ ಐಪಿಎಲ್ ಇತಿಹಾಸದಲ್ಲಿ ಒಟ್ಟು 2954 ರನ್ ಸಿಡಿಸಿದ್ದಾರೆ.
ಬಾಸಿಂಗ ತೊಟ್ಟ ಶ್ರಾವಣಿ; ಮದುಮಗಳ ಅಂದಕ್ಕೆ ಮನಸೋತ ವೀಕ್ಷಕರು