ಕನ್ನಡದ ಪಾಲಿಗೆ ದುಬಾರಿಯಾದ್ರಾ ಸಂಜಿತ್ ಹೆಗ್ಡೆ, ಒಂದು ಹಾಡಿಗೆ ಇಷ್ಟೊಂದು ಸಂಭಾವನೆಯೇ?
By Manjunath B Kotagunasi Jan 17, 2025
Hindustan Times Kannada
ಜೀ ಕನ್ನಡದ ಸರಿಗಮಪ ಸೀಸನ್ 13ರ ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬಂದ ಪ್ರತಿಭೆ ಗಾಯಕ ಸಂಜಿತ್ ಹೆಗ್ಡೆ
ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿ ಪರಭಾಷೆ ಸಿನಿಮಾಗಳವರೆಗೂ ಅವರ ಗಾಯನ ಪಸರಿಸಿದೆ. ಬಾಲಿವುಡ್‌ಗೂ ಕಾಲಿಟ್ಟು ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ
ಹೀಗಿರುವಾಗಲೇ ರುದ್ರ ಗರುಡ ಪುರಾಣ ಸಿನಿಮಾ ಟ್ರೇಲರ್ ಬಿಡುಗಡೆ ವೇಳೆ ಗಾಯಕರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ ನಿರ್ಮಾಪಕ ಕೆ ಮಂಜು
ಹಾಡುಗಳಿಗೆ ಸಂಭಾವನೆಯ ವಿಚಾರದಲ್ಲಿ ಕನ್ನಡದಲ್ಲಿ ಬೆಳೆದ ಗಾಯಕರೇ ಹೆಚ್ಚು ಡಿಮಾಂಡ್ ಮಾಡುತ್ತಿರುವ ಬಗ್ಗೆ ಕೆ ಮಂಜು ಮಾತನಾಡಿದ್ದಾರೆ.
"ಗಾಯಕ ಸಂಜಿತ್ ಹೆಗ್ಡೆ ಕರ್ನಾಟದಲ್ಲಿ ಬೆಳೆದರು. ಆದರೆ, ಈಗ ಅವರು ಹಿಂದಿಗೆ ಮಾರಿಕೊಂಡು ಬಿಟ್ಟಿದ್ದಾರೆ. ಕನ್ನಡ ಸಿನಿಮಾದ ಒಂದು ಹಾಡಿಗೆ 2.5 ಲಕ್ಷ ಕೇಳ್ತಾರೆ"
"ಸೋನು ನಿಗಮ್ ಮರಾಠಿ ಹಾಡು ಹಾಡಿದರೆ 40-50 ಸಾವಿರ ಸಂಭಾವನೆ ಕೊಡಲ್ಲ. ಜಾಸ್ತಿ ಡಿಮಾಂಡ್ ಮಾಡಿದರೆ, ಅಲ್ಲಿನವರು ಅವರನ್ನು ಓಡಿಸಿಬಿಡುತ್ತಾರೆ"
"ಆದರೆ ನಮ್ಮಲ್ಲಿ ಹಾಗಿಲ್ಲ. ಸಂಜಿತ್ ಹೆಗ್ಡೆ ಅವರನ್ನು ಇಷ್ಟಪಟ್ಟು ಬೆಳೆಸುತ್ತಾರೆ. ವಿಪರ್ಯಾಸ ಏನೆಂದರೆ ಕೊನೆಗೆ ಇಲ್ಲಿನ ಒಂದು ಹಾಡಿಗೆ ಎರಡೂವರೆ ಲಕ್ಷ ಕೇಳ್ತಾರೆ"
"ನಿಮ್ಮನ್ನು ಜನರು ಇಲ್ಲಿ ಬೆಳೆಸಿ ಉಳಿಸಿರುತ್ತಾರೆ. ಅವರಿಗಾಗಿ ಕೆಲಸ ಮಾಡಿ, ಚಿತ್ರರಂಗಕ್ಕೆ ಮಾಡಿ. ಸ್ಯಾಂಡಲ್‌ವುಡ್ ಈಗ ಮೊದಲಿನಂತಿಲ್ಲ" ಎಂದು ಅಸಮಾಧಾನ ಹೊರಹಾಕಿದ್ದಾರೆ ನಿರ್ಮಾಪಕ ಕೆ ಮಂಜು.
ಕೆ ಮಂಜು ಅವರ ಈ ಮಾತಿಗೆ ಸಂಜಿತ್ ಹೆಗ್ಡೆ ಈ ವರೆಗೂ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ಅವರ ರೆಸ್ಪಾನ್ಸ್ ಏನಿರಬಹುದು ಎಂಬ ಕುತೂಹಲ ಎಲ್ಲರಲ್ಲಿದೆ