ವಯಸ್ಸು 40 ಆದ್ರೂ 25ರ ಯುವತಿಯಂತೆ ಕಂಗೊಳಿಸಲು ಈ ಆಹಾರ ಸೇವಿಸಿ

Malaika Arora/ Instagram

By Priyanka Gowda
May 08, 2025

Hindustan Times
Kannada

ವಯಸ್ಸಾದಂತೆ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಮುಖದ ಮೇಲೆ ಸುಕ್ಕುಗಳಿಂದ ಹಲವರು ಬಳಲುತ್ತಾರೆ. 25 ವರ್ಷದ ಯುವತಿಯಂತೆ ಕಾಣಲು ಬಯಸಿದ್ರೆ ಪ್ರತಿದಿನ ಈ ಆಹಾರಗಳನ್ನು ಸೇವಿಸಿ.

Malaika Arora/ Instagram

ಅವಕಾಡೊ

ಅವಕಾಡೊದಲ್ಲಿರುವ ಆರೋಗ್ಯಕರ ಕೊಬ್ಬುಗಳು ಚರ್ಮವನ್ನು ತೇವಾಂಶದಿಂದ ಇರಿಸುತ್ತವೆ. ಇದು ಮುಖದ ಮೇಲಿನ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಚರ್ಮವನ್ನು ಪ್ರಕಾಶಮಾನವಾಗಿರಿಸುತ್ತದೆ. 

PIXABAY

ಬ್ಲೂ ಬೆರ್ರಿ

ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಈ ಹಣ್ಣು ಚರ್ಮದ ಕೋಶಗಳನ್ನು ಹಾನಿಯಿಂದ ರಕ್ಷಿಸುತ್ತದೆ. ವಯಸ್ಸಾಗುವ ವೇಗವನ್ನು ನಿಧಾನಗೊಳಿಸುತ್ತದೆ. 

PIXABAY

ಟೊಮೆಟೊ

ಟೊಮೆಟೊದಲ್ಲಿರುವ ಲೈಕೋಪೀನ್ ಎಂಬ ಅಂಶವು ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ ಮತ್ತು ಚರ್ಮದ ಟೋನ್ ಅನ್ನು ಸುಧಾರಿಸುತ್ತದೆ. 

PIXABAY

ಗ್ರೀನ್ ಟೀ

ಇದು ಕ್ಯಾಟೆಚಿನ್ ಎಂಬ ಸಂಯುಕ್ತವನ್ನು ಹೊಂದಿರುತ್ತದೆ. ಇದು ಚರ್ಮದ ಸುಕ್ಕುಗಟ್ಟುವಿಕೆಯನ್ನು ತಡೆಯುತ್ತದೆ.

PEXELS

ಒಣ ಹಣ್ಣುಗಳು-ಬೀಜಗಳು

ಒಣ ಹಣ್ಣುಗಳು ಮತ್ತು ಬೀಜಗಳಲ್ಲಿರುವ ಜೀವಸತ್ವಗಳು ಮತ್ತು ಕೊಬ್ಬಿನಾಮ್ಲಗಳು ಚರ್ಮವನ್ನು ಬಿಗಿಯಾಗಿರಿಸುತ್ತವೆ ಮತ್ತು ಕೂದಲಿನ ಆರೋಗ್ಯವನ್ನು ಸುಧಾರಿಸುತ್ತವೆ.

PEXELS

ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.

ಮಾವಿನ ಸಿಪ್ಪೆಯ ಅದ್ಭುತ ಪ್ರಯೋಜನಗಳು ಇಲ್ಲಿದೆ