ಐಸ್‌ ಬಾತ್‌ ಮಾಡುವುದರಿಂದ ಇದೆ ಇಷ್ಟಲ್ಲಾ ಪ್ರಯೋಜನ

By HT Kannada Desk
Sep 05, 2024

Hindustan Times
Kannada

ಇತ್ತೀಚಿನ ದಿನಗಳಲ್ಲಿ ಹೆಚ್ಚು ಟ್ರೆಂಡ್‌ ಆಗುತ್ತಿರುವ ಐಸ್‌ ಬಾತ್‌ ಅನ್ನು ಅನೇಕ ಸೆಲಿಬ್ರಿಟಿಗಳು ಕೂಡಾ ಇಷ್ಟ ಪಟ್ಟಿದ್ದಾರೆ.

ಐಸ್‌ ಬಾತ್‌ ಮಾಡುವುದರಿಂದ ದೇಹದ ಜೊತೆಗೆ ತ್ವಚೆಗೂ ಅನೇಕ ಪ್ರಯೋಜನಗಳಿವೆ. 

freepik

ಐಸ್‌ ಬಾತ್‌ ಮಾಡುವುದರಿಂದ ದೇಹದ ರಕ್ತಪರಿಚಲನೆ ಹೆಚ್ಚುತ್ತದೆ. ಇದರಿಂದ ತ್ವಚೆ ಹೊಳೆಯುತ್ತದೆ.

ಪಿಂಪಲ್‌ ಅಥವಾ ಗಾಯದಿಂದ ಮುಖ ಊದಿ ಕೊಂಡಿದ್ದರೆ ಐಸ್‌ ಬಾತ್‌ ಅದನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

ಐಸ್‌ ನೀರಿನಿಂದ ಸ್ನಾನ ಮಾಡುವುದರಿಂದ ತ್ವಚೆ ಹೊಳೆಯುತ್ತದೆ. ಮುಖದ ಮೇಲಿರುವ ಕಲೆಗಳನ್ನು ದೂರಮಾಡುತ್ತದೆ.

ಐಸ್‌ ನೀರು ಚರ್ಮದ ರಂದ್ರಗಳನ್ನು ಬಿಗಿಗೊಳಿಸಿ, ಚರ್ಮಕ್ಕೆ ಬಿಗಿತವನ್ನು ತರುತ್ತದೆ. ಸಡಿಲವಾದ ತ್ವಚೆಯಿಂದ ಮುಖದ ಅಂದ ಹಾಳಾಗುವುದನ್ನು ಐಸ್‌ ವಾಟರ್‌ ತಪ್ಪಿಸುತ್ತದೆ.

ನಿಮಗೆ ತ್ವಚೆಯ ಅಲರ್ಜಿ, ಸೋಂಕುಗಳಂತಹ ಸಮಸ್ಯೆಗಳಿದ್ದರೆ ಐಸ್‌ ಬಾತ್‌ ಮಾಡುವುದರಿಂದ ಪರಿಹಾರ ಸಿಗುತ್ತದೆ.

ಐಸ್‌ ನೀರಿನಿಂದ ಸ್ನಾನ ಮಾಡುವುದರಿಂದ ಸ್ಕಿನ್‌ ಟ್ಯಾನಿಂಗ್‌ ಸಮಸ್ಯೆ ದೂರವಾಗುತ್ತದೆ. ಮೊಡವೆ ಮತ್ತು ಬೆವರು ಗುಳ್ಳೆಗಳಿಗೆ ಶಾಶ್ವತ ಪರಿಹಾರ ನೀಡುತ್ತದೆ.

freepik

ಐಸ್‌ ಬಾತ್‌ ತಿಂಗಳಿಗೊಮ್ಮೆ ತೆಗೆದುಕೊಳ್ಳಿ. ಪದೇ ಪದೇ ಐಸ್‌ ಬಾತ್‌ ಮಾಡುವುದರಿಂದ ದೇಹದಲ್ಲಿ ನೋವು ಕಾಣಿಸಿಕೊಳ್ಳುವುದರ ಜೊತೆಗೆ ಅನೇಕ ಬಗೆಯ ತೊಂದರೆಗಳು ಎದುರಾಗಬಹುದು.

ಸೂಕ್ಷ್ಮ ತ್ವಚೆಯವರು ಐಸ್‌ ಬಾತ್‌ ತೆಗದುಕೊಳ್ಳಬೇಡಿ. ಏಕೆಂದರೆ ಅದರಿಂದ ಐಸ್‌ ಬರ್ನ್‌ ಉಂಟಾಗಬಹುದು.

ಮದುವೆಯ ಬಂಧ ಗಟ್ಟಿಯಾಗಿರಲು ಸುಧಾ ಮೂರ್ತಿಯವರ ಮೂರು ಚಿನ್ನದಂತಹ ಸಲಹೆಗಳು

Instagram