ಚರ್ಮದ ಆರೈಕೆಯ ವಿಚಾರಕ್ಕೆ ಬಂದಾಗ ಮುಖ ಮಾತ್ರವಲ್ಲದೇ ನಮ್ಮ ಇಡೀ ದೇಹವನ್ನು ಆರೈಕೆ ಮಾಡಬೇಕು.
ಕೈಗಳು, ಪಾದಗಳು ಮತ್ತು ಕುತ್ತಿಗೆಯ ಭಾಗ ಸಹ ಬಿಸಿಲಿಗೆ ಟ್ಯಾನ್ ಆಗುತ್ತದೆ. ಕೆಲವೊಮ್ಮೆ ಚರ್ಮವು ಸುಟ್ಟು ಹೋದಂತಾಗುತ್ತದೆ. ಅಂತಹ ಸ್ಥಿತಿಯಲ್ಲಿ ಚರ್ಮವನ್ನು ತಾಜಾವಾಗಿರಿಸಿಕೊಳ್ಳುವುದು ಮುಖ್ಯವಾಗುತ್ತದೆ.
ಅದಕ್ಕಾಗಿ ನೀವು ಬಾಡಿ ಸ್ಕ್ರಬ್‌ಗಳನ್ನು ಬಳಸಬೇಕು. ಇದರಿಂದ ಚರ್ಮ ಪ್ಯಾಂಪರ್ ಆಗುತ್ತದೆ ಮತ್ತು ಸ್ವಚ್ಛವಾಗಿರುತ್ತದೆ. ಸ್ಕ್ರಬ್ ಮಾರುಕಟ್ಟೆಯಿಂದ ಖರೀದಿಸುವ ಬದಲು ಮನೆಯಲ್ಲೇ ತಯಾರಿಸಬಹುದು.
ಮನೆಯಲ್ಲೇ ಬಾಡಿ ಸ್ಕ್ರಬ್ ತಯಾರಿಸಲು ಸಕ್ಕರೆ, ಜೇನುತುಪ್ಪ, ತೆಂಗಿನೆಣ್ಣೆ ಹಾಗೂ ನಿಮ್ಮ ನೆಚ್ಚಿನ ಬಾಡಿ ವಾಶ್ ಇವಿಷ್ಟು ಬೇಕು.
ಮೊದಲು ಸಕ್ಕರೆಯನ್ನು ತರಿತರಿಯಾಗಿ ಪುಡಿ ಮಾಡಿ. ಈ ಸಕ್ಕರೆ ಪುಡಿಗೆ ಜೇನುತುಪ್ಪ ಹಾಗೂ ತೆಂಗಿನೆಣ್ಣೆಯನ್ನು ಮಿಶ್ರಣ ಮಾಡಿ. ಇದಕ್ಕೆ ಒಂದು ಚಮಚ ಬಾಡಿ ವಾಶ್ ಸೇರಿಸಿ.
ಈಗ ನಿಮ್ಮ ಸ್ಕ್ರಬ್ ಸಿದ್ಧವಾಗಿದೆ. ಇದನ್ನು ಕೈಕಾಲುಗಳಿಗೆ ಉಜ್ಜಿ, ಚೆನ್ನಾಗಿ ಮಸಾಜ್ ಮಾಡಿ. ಇದರಿಂದ ತ್ವಚೆಯು ಮೊದಲಿಗಿಂತ ಸ್ವಚ್ಛವಾಗಿ, ಮೃದುವಾಗಿ ಕಾಣುತ್ತದೆ.
ಮನೆಯಲ್ಲೇ ತಯಾರಿಸಿದ ಸ್ಕ್ರಬ್ ಟ್ಯಾನ್ ಕಡಿಮೆ ಮಾಡುತ್ತದೆ. ಚರ್ಮವನ್ನು ಪೋಷಿಸುತ್ತದೆ ಹಾಗೂ ಚರ್ಮದಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳುತ್ತದೆ. ವಾರಕ್ಕೆ ಎರಡು ಅಥವಾ ಮೂರು ಬಾರಿ ಈ ಸ್ಕ್ರಬ್ ಬಳಸಿ.
ಈ ಮನೆಮದ್ದಿನಿಂದ ಅಡ್ಡಪರಿಣಾಮಗಳು ಕಡಿಮೆಯಾದರೂ ನಿಮ್ಮದು ಸೂಕ್ಷ್ಮ ಚರ್ಮವಾಗಿದ್ದರೆ ಬಳಸುವ ಮೊದಲು ತಜ್ಞರನ್ನು ಸಂಪರ್ಕಿಸಿ.