ಅನೇಕ ಜನರು ಕಾಫಿ ಕುಡಿಯಲು ಇಷ್ಟಪಡುತ್ತಾರೆ. ಆದರೆ ಕಾಫಿ ಚರ್ಮದ ಕಾಳಜಿಗೂ ಪ್ರಯೋಜನಕಾರಿಯಾಗಿದೆ ಎಂಬುದು ನಿಮಗೆ ತಿಳಿದಿದೆಯೇ, ಇಲ್ಲಿದೆ ಮಾಹಿತಿ.
Pexels
ಟ್ಯಾನ್, ಮೊಡವೆ, ಮುಖದಲ್ಲಿನ ಕಲೆ ಸೇರಿದಂತೆ ವಿವಿಧ ಚರ್ಮದ ಸಮಸ್ಯೆಗಳ ವಿರುದ್ಧ ಹೋರಾಡಲು ಕಾಫಿ ಸಹಾಯ ಮಾಡುತ್ತದೆ.
Pexels
ಡಾರ್ಕ್ ಸರ್ಕಲ್ ತೊಡೆದುಹಾಕಲು ಜೇನುತುಪ್ಪವನ್ನು ಒಂದು ಚಮಚ ಕಾಫಿ ಪುಡಿಯೊಂದಿಗೆ ಬೆರೆಸಿ. ಈ ಮಿಶ್ರಣವನ್ನು ಕಣ್ಣುಗಳ ಕೆಳಗೆ ಹಚ್ಚಿ 10 ರಿಂದ 15 ನಿಮಿಷಗಳ ಕಾಲ ಹಾಗೆಯೇ ಬಿಡಿ, ನಂತರ ತೊಳೆಯಿರಿ.
Pexels
ಮೊಡವೆ ಹೋಗಲಾಡಿಸಲು ಕಡಲೆ ಹಿಟ್ಟು, ಜೇನುತುಪ್ಪ ಮತ್ತು ಅಲೋವೆರಾ ರಸವನ್ನು ಕಾಫಿ ಪುಡಿಯಲ್ಲಿ ಬೆರೆಸಿ ಮುಖಕ್ಕೆ ಹಚ್ಚಿ. ಒಣಗಿದ ನಂತರ ಮುಖವನ್ನು ನೀರಿನಿಂದ ತೊಳೆಯಿರಿ.
Pexels
ಕಾಫಿಯಲ್ಲಿರುವ ಪಾಲಿಫಿನಾಲ್‌ಗಳು ಸೂರ್ಯನ ಹಾನಿಯಿಂದ ಮುಖವನ್ನು ರಕ್ಷಿಸುತ್ತವೆ. ಇದಕ್ಕಾಗಿ, ನಿಂಬೆ ರಸವನ್ನು ಕಾಫಿ ಪುಡಿಯೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಬಹುದು.
Pexels
ಕಾಫಿಯಲ್ಲಿರುವ ಕೆಫೀನ್ ಕಣ್ಣಿನ ಕೆಳಗೆ ಊತ (ಪಫಿನೆಸ್) ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಕ್ಕಾಗಿ, ಕಾಫಿಯಲ್ಲಿ ತಣ್ಣೀರನ್ನು ಬೆರೆಸಿ ಹತ್ತಿ ಪ್ಯಾಡ್ ಸಹಾಯದಿಂದ ಕಣ್ಣುಗಳ ಕೆಳಗೆ ಹಚ್ಚಿ.
Unsplash
ಕಾಫಿ ಪುಡಿಗೆ ಅಕ್ಕಿ ಹಿಟ್ಟು, ಜೇನುತುಪ್ಪ ಮತ್ತು ಹಸಿ ಹಾಲನ್ನು ಬೆರೆಸಿ ಪೇಸ್ಟ್ ತಯಾರಿಸಿ. ವೃತ್ತಾಕಾರದ ಚಲನೆಯಲ್ಲಿ ಮಸಾಜ್ ಮಾಡಿ, ಸ್ವಲ್ಪ ಸಮಯದ ನಂತರ ಮುಖ ತೊಳೆಯಿರಿ. ಇದರಿಂದ ಚರ್ಮ ಹೊಳೆಯುತ್ತದೆ.
Pexels
ಸಕ್ಕರೆ ಮತ್ತು ಮೊಸರನ್ನು ಕಾಫಿ ಪುಡಿಯೊಂದಿಗೆ ಬೆರೆಸಿ ಕಾಫಿ ಸ್ಕ್ರಬ್ ತಯಾರಿಸಿ. ಇದರಿಂದ ಮುಖಕ್ಕೆ ಸ್ಕ್ರಬ್ ಮಾಡಿ. ಮುಖ ಹೊಳೆಯುತ್ತದೆ.