ಈ 4 ವಸ್ತು ಇದ್ರೆ ಸಾಕು ಮನೆಯಲ್ಲೇ ಸುಲಭವಾಗಿ ಬಾಡಿ ಲೋಷನ್ ತಯಾರಿಸಿಕೊಳ್ಳಬಹುದು 

By Reshma
Nov 26, 2024

Hindustan Times
Kannada

ಚಳಿಗಾಲ ಎಂದಾಕ್ಷಣ ಚರ್ಮ ಒಣಗುವುದು ಸಾಮಾನ್ಯ. ಚರ್ಮದ ಸದಾ ತೇವಾಂಶದಿಂದ ಕೂಡಿದ್ದು, ಮೃದುವಾಗಿರಲು ಬಾಡಿ ಲೋಷನ್ ಅಥವಾ ಮಾಯಿಶ್ಚರೈಸರ್ ಹಚ್ಚುವುದು ಮುಖ್ಯ 

ಮಾರುಕಟ್ಟೆಯಲ್ಲಿ ಹಲವು ಬಾಡಿ ಲೋಷನ್‌ಗಳು ಲಭ್ಯವಿದ್ದರೂ ನೀವು ರಾಸಾಯನಿಕ ಮುಕ್ತ ಬಾಡಿ ಲೋಷನ್ ಬಳಸಲು ಬಯಸಿದರೆ ಮನೆಯಲ್ಲಿ ಸುಲಭವಾಗಿ ಇದನ್ನು ತಯಾರಿಸಿಕೊಳ್ಳಬಹುದು 

ಮನೆಯಲ್ಲೇ ಬಾಡಿ ಲೋಷನ್ ತಯಾರಿಸಲು ನಿಮಗೆ ಕೇವಲ ನಾಲ್ಕು ವಸ್ತುಗಳು ಬೇಕಾಗುತ್ತದೆ. ಆಲೊವೆರಾ ಜೆಲ್, ಗ್ಲಿಸರಿನ್‌, ಬಾದಾಮಿ ಎಣ್ಣೆ ಮತ್ತು ವಿಟಮಿನ್ ಇ ಕ್ಯಾಪ್ಸುಲ್ 

ಈ ನಾಲ್ಕು ಪದಾರ್ಥಗಳನ್ನು ಒಂದು ದೊಡ್ಡ ಪಾತ್ರೆಯಲ್ಲಿ ಹಾಕಿ ಹಾಗೂ ಲೋಷನ್ ರೀತಿ ಕಾಣುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ 

ನಂತರ ಅದನ್ನು ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿ ಇಡಬಹುದು. ಇದನ್ನು ಒಂದು ತಿಂಗಳ ಅಥವಾ ಅದಕ್ಕಿಂತ ಹೆಚ್ಚು ದಿನಗಳ ಕಾಲ ಸಂಗ್ರಹಿಸಿ ಇಡಬಹುದು 

ಇದನ್ನು ದಿನಕ್ಕೆ 2 ರಿಂದ 3 ಬಾರಿ ಚರ್ಮಕ್ಕೆ ಹಚ್ಚಿ, ಚೆನ್ನಾಗಿ ಮಸಾಜ್ ಮಾಡಿ. ಕೆಲವೇ ದಿನಗಳಲ್ಲಿ ಚರ್ಮ ಮೃದುವಾಗಿ ಮೊದಲಿಗಿಂತ ಚೆನ್ನಾಗಿ ಕಾಣುತ್ತದೆ 

ಇದರಲ್ಲಿರುವ 4 ವಸ್ತುಗಳು ಚರ್ಮಕ್ಕೆ ಒಳ್ಳೆಯದು, ಇದು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ 

ಈ ಸುದ್ದಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದ ಬರಹ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ

ಕೊಹ್ಲಿ-ಧೋನಿ ಬಳಿಕ ರೋಹಿತ್ ಮುಜುಗರದ ದಾಖಲೆ