ಮಹಿಳಾ ಪ್ರೀಮಿಯರ್ ಲೀಗ್ ಫೆ. 23ರಿಂದ ಶುರುವಾಗಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಸಿದ್ಧತೆ ನಡೆಸುತ್ತಿದೆ.
ಲೀಗ್ ಆರಂಭಕ್ಕೂ ಮುನ್ನವೇ ಸ್ಮೃತಿ ಮಂಧಾನ ಆರ್ ಸಿಬಿಗೆ ನೀಡಿರುವ ಸಂದರ್ಶನದಲ್ಲಿ ತನ್ನ ಫೇವರಿಟ್ ಫುಡ್ ಯಾವುದೆಂದು ವಿವರಿಸಿದ್ದಾರೆ.
ತನಗೆ ಪಾನಿಪೂರಿ, ಬೇಲ್ ಪುರಿ, ಸೇವ್ ಪುರಿ ಅಂದರೆ ಅಂದರೆ ಇಷ್ಟವೆಂದು ಬಹಿರಂಗಪಡಿಸಿದ್ದಾರೆ. ಅದರಲ್ಲೂ ಮನೆಯಲ್ಲಿ ಮಾಡುವುದಲ್ಲ, ಬೀದಿ ಬದಿಗಳಲ್ಲಿ ತಿನ್ನುವುದೆಂದರೆ ಇಷ್ಟ ಎಂದಿದ್ದಾರೆ.
ಇದೇ ವೇಳೆ ತನ್ನ ಅಡ್ಡ ಹೆಸರು ಏನೆಂಬುದನ್ನು ತಿಳಿಸಿದ್ದಾರೆ. ಅವರ ತಂದೆ ಬೆಬು ಎಂದು ಕರೆಯುವುದಾಗಿ ಹೇಳಿದ್ದಾರೆ.
ಕಳೆದ ಡಬ್ಲ್ಯುಪಿಎಲ್ ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಸ್ಮೃತಿ ಈ ಬಾರಿ ಅದ್ಭುತ ಪ್ರದರ್ಶನ ನೀಡುವುದರ ಜೊತೆಗೆ ತಂಡಕ್ಕೆ ಚೊಚ್ಚಲ ಟ್ರೋಫಿ ಗೆದ್ದುಕೊಡುವ ಇರಾದೆಯಲ್ಲಿದ್ದಾರೆ.
ಫೆಬ್ರವರಿ 24 ರಿಂದ ಆರ್ ಸಿಬಿ ತನ್ನ ಅಭಿಯಾನ ಆರಂಭಿಸಲಿದೆ. ತವರಿನ ಚಿನ್ನಸ್ವಾಮಿ ಮೈದಾನದಲ್ಲಿ ಕನ್ನಡಿಗರನ್ನು ರಂಜಿಸಲು ಸಜ್ಜಾಗಿದ್ದಾರೆ.
ಹಳದಿ ಬಣ್ಣದ ಗೌನ್ ತೊಟ್ಟ ತುಪ್ಪದ ಬೆಡಗಿ; ಇಲ್ಲಿವೆ ರಾಗಿಣಿ ದ್ವಿವೇದಿ ಫೋಟೋಸ್