ಗೂಬೆಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳಿವು
Photo Credit: Pexels
By Priyanka Gowda
Jan 31, 2025
Hindustan Times
Kannada
ರಾತ್ರಿ ವೇಳೆ ಹೆಚ್ಚು ಕ್ರಿಯಾಶೀಲವಾಗಿರುವ ಗೂಬೆಗಳು ಕೆಲವು ಅಸಾಧಾರಣ ಸಾಮರ್ಥ್ಯಗಳನ್ನು ಹೊಂದಿರುವ ಆಕರ್ಷಕ ಜೀವಿಗಳು.
Photo Credit: Pexels
ಗೂಬೆಗಳು ಅಸಾಧಾರಣ ಶ್ರವಣಶಕ್ತಿಯನ್ನು ಹೊಂದಿದ್ದು, ಇದು ರಾತ್ರಿಯಲ್ಲಿ ಬೇಟೆಯಾಡಲು ಅನುವು ಮಾಡಿಕೊಡುತ್ತದೆ.
Photo Credit: Pexels
ಗೂಬೆಗಳು ತಮ್ಮ ತಲೆಯನ್ನು ಎರಡೂ ದಿಕ್ಕಿನಲ್ಲಿ 270 ಡಿಗ್ರಿ ತಿರುಗಿಸಬಹುದು. ಅವುಗಳ ಕುತ್ತಿಗೆಯಲ್ಲಿ 14 ಕಶೇರುಕಗಳು ಇರುವುದರಿಂದ ತಲೆಯನ್ನು ಎರಡೂ ದಿಕ್ಕಿಗೂ ತಿರುಗಿಸಲು ಸಾಧ್ಯ.
Photo Credit: Pexels
ಗೂಬೆಗಳು ಮೌನವಾಗಿ ಹಾರುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿವೆ. ಅವುಗಳ ಗರಿಗಳು ಶಬ್ಧವನ್ನು ಕಡಿಮೆ ಮಾಡುವ ವಿಶೇಷ ರಚನೆಯನ್ನು ಹೊಂದಿವೆ
Photo Credit: Pexels
ಗೂಬೆಗಳು ವಿಶೇಷವಾಗಿ ಕಡಿಮೆ ಬೆಳಕಿನಲ್ಲಿ ಅತ್ಯುತ್ತಮ ದೃಷ್ಟಿ ಸಾಮರ್ಥ್ಯವನ್ನು ಹೊಂದಿವೆ.
Photo Credit: Pexels
ಗೂಬೆಗಳು ತೀಕ್ಷ್ಣವಾದ ಕೊಕ್ಕನ್ನು ಹೊಂದಿರುತ್ತವೆ. ಇದು ತಮ್ಮ ಬೇಟೆಯನ್ನು ಸುಲಭವಾಗಿ ಹಿಡಿಯಲು, ಛಿದ್ರಗೊಳಿಸಲು ಮತ್ತು ತಿನ್ನಲು ಸಹಾಯ ಮಾಡುತ್ತದೆ.
Photo Credit: Pexels
ತಮ್ಮ ಮೌನ ಹಾರಾಟ, ಅತ್ಯುತ್ತಮ ಶ್ರವಣಶಕ್ತಿ ಮತ್ತು ತೀಕ್ಷ್ಣವಾದ ದೃಷ್ಟಿ ಹೊಂದಿರುವ ಗೂಬೆಗಳು, ವಿಶೇಷವಾಗಿ ರಾತ್ರಿ ವೇಳೆಯ ಅತ್ಯುತ್ತಮ ಬೇಟೆಗಾರ ಪಕ್ಷಿಗಳಾಗಿವೆ.
Photo Credit: Pexels
ಗೂಬೆಗಳಲ್ಲಿ ವಿಶಿಷ್ಟ ಸಾಮರ್ಥ್ಯವಿರುವುದರಿಂದ ಇವುಗಳು ಪ್ರಕೃತಿಯ ಅತ್ಯಂತ ಆಕರ್ಷಕ ಜೀವಿಗಳಲ್ಲಿ ಒಂದಾಗಿದೆ.
Photo Credit: Pexels
ನೂತನ ಜೆರ್ಸಿಯಲ್ಲಿ ಭಾರತದ ಆಟಗಾರರು ಮಿಂಚು; ಫೋಟೋಸ್ ಇಲ್ಲಿವೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ