ಟ್ರೋಲ್ ಆಗ್ತಿರುವ ಹಾರ್ದಿಕ್ ಬೆಂಬಲಕ್ಕೆ ನಿಂತ ಸೋನುಸೂದ್

By Prasanna Kumar P N
Mar 30, 2024

Hindustan Times
Kannada

ಮುಂಬೈ ಇಂಡಿಯನ್ಸ್ ಸತತ ಎರಡು ಪಂದ್ಯ ಸೋತ ಬೆನ್ನಲ್ಲೇ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.

ಇದರ ಬೆನ್ನಲ್ಲೇ ನಟ ಸೋನುಸೂದ್ ಅವರು ಹಾರ್ದಿಕ್ ಬೆಂಬಲಕ್ಕೆ ನಿಂತಿದ್ದು, ನಮ್ಮ ಆಟಗಾರರನ್ನು ದ್ವೇಷಿಸುವುದು ಸರಿಯಲ್ಲ ಎಂದಿದ್ದಾರೆ.

ಪಾಂಡ್ಯ ಬೆಂಬಲಿಸಿ ಸೋನುಸೂದ್ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ್ದಾರೆ. ಪಾಂಡ್ಯ ಹೆಸರನ್ನು ನೇರವಾಗಿ ಉಲ್ಲೇಖಿಸದಿದ್ದರೂ, ಆತನ ವಿರುದ್ಧ ಟ್ರೋಲ್ ಮಾಡುತ್ತಿರುವವರಿಗೆ ಚಾಟಿ ಬೀಸಿದ್ದಾರೆ.

'ನಮ್ಮ ದೇಶದ ಕ್ರೀಡಾಪಟುಗಳು ನಮ್ಮ ಹೀರೋಗಳು. ನಾವು ನಮ್ಮ ಆಟಗಾರರನ್ನು ಗೌರವಿಸಬೇಕು' ಎಂದು ಹೇಳಿದ್ದಾರೆ.

'ಒಂದು ದಿನ ನೀವು ಅವರನ್ನು ಚಿಯರ್ ಮಾಡುತ್ತಿರಿ, ಮರುದಿನ ನೀವು ಅವರನ್ನು ಕೆರಳಿಸುತ್ತೀರಿ. ಆದರೆ ಸೋಲುವುದು ಅವರಲ್ಲ, ನಾವೇ' ಎಂದಿದ್ದಾರೆ.

'ನಾನು ಕ್ರಿಕೆಟ್ ಪ್ರೀತಿಸುತ್ತೇನೆ. ನನ್ನ ದೇಶವನ್ನು ಪ್ರತಿನಿಧಿಸುವ ಪ್ರತಿಯೊಬ್ಬ ಕ್ರಿಕೆಟಿಗನನ್ನು ನಾನು ಪ್ರೀತಿಸುತ್ತೇನೆ' ಎಂದಿದ್ದಾರೆ.

ನಮ್ಮ ಆಟಗಾರ ಯಾವ ಫ್ರಾಂಚೈಸಿಗಾಗಿ ಆಡುತ್ತಾರೆ ಎಂಬುದು ಮುಖ್ಯವಲ್ಲ. ನಾಯಕನಾಗಿ ಆಡುತ್ತಿದ್ದಾರೋ ಅಥವಾ ತಂಡದಲ್ಲಿ 15ನೇ ಆಟಗಾರನಾಗಿದ್ದರೂ ಪರವಾಗಿಲ್ಲ. ಅವರೇ ನಮ್ಮ ಹೀರೋ ಎಂದು ದ್ವೇಷಿಸುವುದನ್ನು ನಿಲ್ಲಿಸುವಂತೆ ವಿನಂತಿಸಿದ್ದಾರೆ.

ಲೋಕಸಭಾ ಚುನಾವಣೆ 2024 - ಏಪ್ರಿಲ್ 26ಕ್ಕೆ ಮತದಾನ -ಮರೆಯಬೇಡಿ ಮತ್ತೆ... 

@ceo_karnataka