ಗುಲಾಬಿ ಬಣ್ಣದ ಸೀರೆಯಲ್ಲಿ ಗುಲಾಬಿ ಹೂವಿನಂತೆ ಕಂಗೊಳಿಸಿದ ತಮನ್ನಾ
By Reshma
Apr 15, 2025
Hindustan Times
Kannada
ದಕ್ಷಿಣ ಭಾರತದ ಜನಪ್ರಿಯ ನಟಿ ತಮನ್ನಾ ಸೌಂದರ್ಯಕ್ಕೆ ಸಾಟಿಯಿಲ್ಲ. ದಿನದಿಂದ ದಿನಕ್ಕೆ ಅಂದಗಾತಿಯಾಗುತ್ತಿದ್ದಾರೆ ಈ ಬೆಡಗಿ
ಆಗಾಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸುಂದರ ಫೋಟೊಗಳನ್ನು ಹಂಚಿಕೊಳ್ಳುವ ತಮನ್ನಾ ಅಭಿಮಾನಿಗಳಿಂದ ಮೆಚ್ಚುಗೆ ಪಡೆಯುತ್ತಾರೆ
ಇದೀಗ ಗುಲಾಬಿ ಬಣ್ಣದ ಸೀರೆಯುಟ್ಟು ಸೌಂದರ್ಯಕ್ಕೆ ಸೆಡ್ಡು ಹೊಡೆಯುವಂತೆ ಫೋಟೊಗಳಿಗೆ ಪೋಸ್ ನೀಡಿದ್ದಾರೆ
ಗುಲಾಬಿ ಬಣ್ಣದ ಸೀರೆಯಲ್ಲಿ ಗುಲಾಬಿಯಂತೆ ಅರಳಿದ ತಮನ್ನಾ ಸೌಂದರ್ಯ ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ
ತಮನ್ನಾ ನಟನೆಯ ಓದೆಲಾ 2 ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಏಪ್ರಿಲ್ 17ಕ್ಕೆ ಥಿಯೇಟರ್‌ನಲ್ಲಿ ಬಿಡುಗಡೆ ಎಂದು ಬರೆದುಕೊಂಡು ಒಂದಿಷ್ಟು ಫೋಟೊಗಳನ್ನು ಹಂಚಿಕೊಂಡಿದ್ದಾರೆ
ಸೀರೆಯ ಜೊತೆಗೆ ಕತ್ತಿನಲ್ಲಿ ಮುತ್ತಿನ ಚೋಕರ್ ನೆಕ್ಲೇಸ್ ಧರಿಸಿದ್ದಾರೆ. ಇದು ಅವರ ಅಂದವನ್ನು ಇನ್ನಷ್ಟು ಹೆಚ್ಚಿಸಿದೆ
ಕಡಿಮೆ ಮೇಕಪ್‌ನಲ್ಲಿ ಮುದ್ದಾಗಿ ಕಾಣುತ್ತಿರುವ ತಮನ್ನಾ ಧರೆಗಿಳಿದು ಬಂದ ದೇವತೆ ಎಂದು ಅಭಿಮಾನಿಗಳು ಕಾಮೆಂಟ್ ಹಾಕುತ್ತಿದ್ದಾರೆ
ಓದೆಲಾ 2 ಸಿನಿಮಾ 'ಓದೆಲಾ ರೈಲ್ವೆ ಸ್ಟೇಷನ್' ಚಿತ್ರದ ಮುಂದುವರಿದ ಭಾಗ, ಇದರಲ್ಲಿ ವಷಿಷ್ಠ ಸಿಂಹ ಹಾಗೂ ತಮನ್ನಾ ಜೊತೆಯಾಗಿ ನಟಿಸಿದ್ದಾರೆ
Horoscope: ಮಕ್ಕಳು ಪ್ರಗತಿ ಹೊಂದುತ್ತಾರೆ; ಏಪ್ರಿಲ್ 20ರ ಭಾನುವಾರ ದಿನ ಭವಿಷ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ