ನಾಸಾ ಸೆರೆ ಹಿಡಿದ ವಿವಿಧ ಗ್ರಹಗಳ ಅದ್ಭುತ ಚಿತ್ರಗಳನ್ನ ನೀವೂ ಕಣ್ತುಂಬಿಕೊಳ್ಳಿ
By Reshma Feb 25, 2024
Hindustan Times Kannada
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಆಗಾಗ ಗ್ರಹಗಳ ಚಿತ್ರಗಳನ್ನು ಸೆರೆ ಹಿಡಿಯುತ್ತಿರುತ್ತದೆ. ನಾಸಾ ಸೆರೆ ಹಿಡಿದ ಗ್ರಹಗಳ ಕಣ್ಮನ ಸೆಳೆವ ಚಿತ್ರಗಳ ನೋಟ ಇಲ್ಲಿದೆ
ಪ್ರಜ್ವಲಿಸುವ ಬುಧನ ಚಿತ್ರವನ್ನು ನಾಸಾದ ಮರ್ಕ್ಯುರಿ ಸರ್ಫೇಸ್, ಸ್ಪೇಸ್ ಎನ್ವಿರಾನ್‌ಮೆಂಟ್, ಜಿಯೊಕೆಮಿಸ್ಡ್ರಿ ಮತ್ತು ರೇಜಿಂಗ್ ಬಾಹ್ಯಾಕಾಶ ಸಂಸ್ಥೆ ಸೆರೆ ಹಿಡಿದಿದೆ.
ಶನಿಗ್ರಹದ ಚಿತ್ರವನ್ನು ನಾಸಾದ ಕ್ಯಾಸಿನಿ ಸೆರೆ ಹಿಡಿದಿದೆ. 2008ರಲ್ಲಿ ಸೆರೆಹಿಡಿದ ಚಿತ್ರ ಇದಾಗಿದ್ದು, 6,90,000 ಮೈಲಿ ದೂರದಿಂದ ಸೆರೆ ಹಿಡಿಯಲಾಗಿದೆ. ಶನಿ ಉಂಗುರಗಳು ಚಿತ್ರದ ಎರಡೂ ಬದಿ ವಿಸ್ತರಿಸಿರುವುದು ಕಾಣಬಹುದಾಗಿದೆ.
ಗುರುಗ್ರಹದ ಉತ್ತರ ಗೋಳಾರ್ಧದ ಕ್ಲೋಸ್‌ಅಪ್ ಫೋಟೊಗಳಿವು. ನೀಲಿ, ಕಂದು ಹಾಗೂ ಬಿಳಿ ಬಣ್ಣಗಳು ಹರಡಿರುವುದನ್ನು ಇದರಲ್ಲಿ ಕಾಣಬಹುದಾಗಿದೆ.
ಜಿಯೋಸ್ಟೇಷನರಿ ಆಪರೇಷನಲ್ ಎನ್ವಿರಾನ್ಮೆಂಟಲ್ ಸ್ಯಾಟಲೈಟ್ಸ್ ಸೆರೆ ಹಿಡಿದ ಭೂಮಿಯ ಪಶ್ಚಿಮ ಗೋಳಾರ್ಧದ ಚಿತ್ರವಿದು.
ನಾಸಾದ ನ್ಯೂ ಹೊರೈಜನ್ಸ್ ಬಾಹ್ಯಾಕಾಶ ನೌಕೆ ಸೆರೆ ಹಿಡಿದ ಪ್ಲೊಟೊದ ಕೋಸ್ಲ್‌ಅಪ್ ಫೋಟೊವಿದು.
ಮಂಗಳ ಗ್ರಹದ ಈ ಫೋಟೊ ಇದಾಗಿದ್ದು, ಈ ಗ್ರಹದ ಮೇಲ್ಮೈ ಮೇಲೆ ಕೆಂಪು ಹಾಗೂ ಕಂದು ಬಣ್ಣದ ಚಿತ್ತಾರವಿರುವುದನ್ನು ಕಾಣಬಹುದು. ಅಲ್ಲಲ್ಲಿ ಬಿರುಕು ಇರುವಂತೆ ಚಿತ್ರದಲ್ಲಿ ಕಾಣಬಹುದಾಗಿದೆ.
ಶುಕ್ರನ ಈ ಚಿತ್ರವನ್ನು ನಾಸಾದ ಮ್ಯಾರಿನರ್ 10 ಬಾಹ್ಯಾಕಾಶ ನೌಕೆ ಸೆರೆ ಹಿಡಿದಿದೆ. ಕೆಂಪು ಹಾಗೂ ಕಂದುಬಣ್ಣದ ನಡುವೆ ಬಿಳಿ ಬಣ್ಣದ ಸುರುಳಿಗಳನ್ನು ಚಿತ್ರದಲ್ಲಿ ಕಾಣಬಹುದಾಗಿದೆ.
1986ರಲ್ಲಿ ನಾಸಾದ ವಾಯೇಜರ್ 2 ಬಾಹ್ಯಾಕಾಶ ನೌಕೆ ಈ ಯರೇನಸ್ ಗ್ರಹದ ಫೋಟೊವನ್ನು ಸೆರೆ ಹಿಡಿದಿದೆ.
ನಾಸಾದ ವಾಯೇಜರ್ 2 ಬಾಹ್ಯಾಕಾಶ ನೌಕೆ ಸೆರೆ ಹಿಡಿದ ನೆಪ್ಚೂನ್ ಚಿತ್ರವಿದು.
ಗುರುಗ್ರಹದ ಈ ಫೋಟೊವನ್ನು ನಾಸಾದ ಜೇಮ್ಸ್ ವೆಬ್ ಟೆಲೆಸ್ಕೋಪ್ ಸಂವೇದಕಗಳಿಂದ ಸಂಗ್ರಹಿಸಲಾದ ಕಚ್ಚಾ ಡೇಟಾದಿಂದ ಸಂಸ್ಕರಿಸಲಾಗಿದೆ.